ಕೋವಿಡ್-19ನ ಡೆಲ್ಟಾ ಅವತರಣಿಕೆಯ ವೈರಾಣುಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವಂತೆ ಎಲ್ಲೆಡೆ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಜುಲೈ 18ರಿಂದ ರಾಜ್ಯಾದ್ಯಂತ ಹತ್ತು ದಿನಗಳ ಲಾಕ್‌ಡೌನ್ ಘೋಷಣೆ ಮಾಡಲು ಮಣಿಪುರ ಸರ್ಕಾರ ನಿರ್ಧರಿಸಿದೆ.
ಅತ್ಯಗತ್ಯ ಸೇವೆಗಳನ್ನು ಹೊರತುಪಡಿಸಿದಂತೆ ಎಲ್ಲಾ ಸಂಸ್ಥೆಗಳು ಮುಚ್ಚಿರಲಿವೆ ಎಂದು ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ತಿಳಿಸಿದ್ದಾರೆ. ಲಸಿಕೆ ಪಡೆಯಲು ಹೊರಬರುವ ಮಂದಿಗೆ ಮಾತ್ರವೇ ಮನೆಗಳಿಂದ ಹೊರಗೆ ಬರಲು ಅವಕಾಶ ನೀಡಲಾಗುವುದು ಎಂದು ಸಿಂಗ್ ತಿಳಿಸಿದ್ದಾರೆ.
ಬರೋಬ್ಬರಿ 9 ತಿಂಗಳ ಬಳಿಕ ಪ್ರವಾಸಿಗರಿಗೆ ತೆರೆದುಕೊಳ್ಳಲಿದೆ ಐಫೆಲ್ ಟವರ್
ಕಳೆದ 24 ಗಂಟೆಗಳಲ್ಲಿ 1,104 ಹೊಸ ಕೋವಿಡ್ ಕೇಸುಗಳನ್ನು ಕಂಡಿರುವ ಮಣಿಪುರದಲ್ಲಿ ಒಟ್ಟಾರೆ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಕ್ರಿಯ ಸಂಖ್ಯೆ 8,210 ಇದೆ.