ಹಳ್ಳಿ-ಹಳ್ಳಿಗೂ ಇಂಟರ್ನೆಟ್ ಬಂದಿದೆ. ಎಲ್ಲರ ಕೈನಲ್ಲಿ ಸ್ಮಾರ್ಟ್ಫೋನ್ ಇದೆ. ಸಣ್ಣ-ಪುಟ್ಟ ವಿಷ್ಯಗಳೂ ಜನರನ್ನು ಸುಲಭವಾಗಿ ತಲುಪುತ್ತಿವೆ. ಆದ್ರೆ ಇಷ್ಟರ ಮಧ್ಯೆಯೂ ಅನೇಕರು ಇಂಟರ್ನೆಟ್ ಬಳಕೆ ಮಾಡ್ತಿಲ್ಲ. ಇಂಟರ್ನೆಟ್ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಅಂತಹ ಜನರಿಗೆ ಯುಐಡಿಎಐ ಅನೇಕ ಸೌಲಭ್ಯಗಳನ್ನು ಒದಗಿಸುತ್ತಿದೆ.
ಯುಐಡಿಎಐ ಆಧಾರ್ ಗೆ ಸಂಬಂಧಿಸಿದ ಕೆಲವು ಸೇವೆಗಳನ್ನು ಪ್ರಾರಂಭಿಸಿದೆ. ಇದನ್ನು ಎಸ್ಎಂಎಸ್ ಮೂಲಕ ಪಡೆಯಬಹುದು. ಇದಕ್ಕಾಗಿ ನೀವು ಇಂಟರ್ನೆಟ್‌ನ ಯುಐಡಿಎಐ ವೆಬ್‌ಸೈಟ್ ತೆರೆಯುವ ಅಗತ್ಯವಿಲ್ಲ. ಆಧಾರ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಬೇಕಾಗಿಲ್ಲ. ಇದಕ್ಕಾಗಿ ಸ್ಮಾರ್ಟ್‌ಫೋನ್ ಅಗತ್ಯವಿಲ್ಲ. ಇಂಟರ್ನೆಟ್ ಸೌಲಭ್ಯವನ್ನು ಹೊಂದಿರದ ಸರಳ ಫೀಚರ್ ಫೋನ್‌ನಿಂದ ಈ ಸೇವೆಯನ್ನು ಪಡೆಯಬಹುದು.
ವರ್ಚುವಲ್ ಐಡಿ ಮರು ಪಡೆಯುವಿಕೆ, ಆಧಾರ್ ಲಾಕ್ ಹಾಗೂ ಅನ್ ಲಾಕ್, ಬಯೋಮೆಟ್ರಿಕ್ ಲಾಕಿಂಗ್, ಅನ್ಲಾಕಿಂಗ್ ಸೇರಿದಂತೆ ಅನೇಕ ಸೇವೆಗಳನ್ನು ಪಡೆಯಬಹುದು. ಇಷ್ಟೇ ಅಲ್ಲ ನಿಮಗೆ ಬೇಕಾದ ಸೇವೆ ಬಗ್ಗೆ ಮಾಹಿತಿ ಪಡೆಯಲು ನೀವು, ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ನಿಂದ 1947 ನಂಬರ್ ಗೆ ಎಸ್ಎಂಎಸ್ ಮಾಡಬೇಕು. ಒಂದು ಎಸ್ಎಂಎಸ್ ಮೂಲಕ ನೀವು ನಿಮ್ಮ ಆಧಾರ್ ಲಾಕ್ ಹಾಗೂ ಅನ್ಲಾಕ್ ಮಾಡಬಹುದು.
ಮೊದಲು GETOTP ಎಂದು ಟೈಪ್ ಮಾಡಿ ಸ್ಪೇಸ್ ಬಿಟ್ಟು ಆಧಾರ್ ನ ಕೊನೆಯ ನಾಲ್ಕು ನಂಬರ್ ನಮೂದಿಸಿ. ಒಟಿಪಿ ಪಡೆದ ಕೂಡಲೇ ಎರಡನೇ ಎಸ್‌ಎಂಎಸ್ ಕಳುಹಿಸಬೇಕು. LOCKUID ಸ್ಪೇಸ್ ಆಧಾರ್ ಸಂಖ್ಯೆಯ ಕೊನೆಯ ನಾಲ್ಕು ಅಂಕಿ ಸ್ಪೇಸ್ ಒಟಿಪಿ ಟೈಪ್ ಮಾಡಿ ಎಸ್ಎಂಎಸ್ ಕಳುಹಿಸಬೇಕು. ಅನ್ ಲಾಕ್ ಮಾಡುವಾಗ್ಲೂ ಇದೇ ರೀತಿ ಎಸ್ಎಂಎಸ್ ಕಳುಹಿಸಬೇಕು. ಆಗ LOCKUID ಬದಲು UNLOCK ಬಳಸಬೇಕು.