alex Certify ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತೆ ಸುರೇಖಾ ಸಿಕ್ರಿ ಇನ್ನಿಲ್ಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತೆ ಸುರೇಖಾ ಸಿಕ್ರಿ ಇನ್ನಿಲ್ಲ

ರಾಷ್ಟ್ರೀಯ ಚಲನಚಿತ್ರ ಪುರಸ್ಕೃತೆ ಸುರೇಖಾ ಸಿಕ್ರಿ ಹೃದಾಯಾಘಾತದಿಂದ ನಿಧನರಾಗಿದ್ದಾರೆ. ಅನೇಕ ತಿಂಗಳ ಹಿಂದೆ ಅನಾರೋಗ್ಯಕ್ಕೀಡಾಗಿದ್ದ 75 ವರ್ಷದ ಸುರೇಖಾ ಸಿಕ್ರಿ ಇಂದು ನಿಧನರಾಗಿದ್ದಾರೆ ಎಂದು ಮ್ಯಾನೇಜರ್​ ಮಾಹಿತಿ ನೀಡಿದ್ದಾರೆ. ಕಳೆದ ವರ್ಷ ಸುರೇಖಾ ಸಿಕ್ರಿಗೆ ಬ್ರೇನ್​ ಸ್ಟ್ರೋಕ್​ ಸಂಭವಿಸಿತ್ತು.

ಮೂರು ಬಾರಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತೆ ಸುರೇಖಾ ಸಿಕ್ರಿ ಇಂದು ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಎರಡನೇ ಬಾರಿಗೆ ಮೆದುಳಿನಲ್ಲಿ ಸ್ಟ್ರೋಕ್​ ಸಂಭವಿಸಿದ ಬಳಿಕ ಅವರು ತೀವ್ರ ಅನಾರೋಗ್ಯಕ್ಕೀಡಾಗಿದ್ದರು. ಸುರೇಖಾ ತಮ್ಮ ಕುಟುಂಬಸ್ಥರ ಜೊತೆಯೇ ಇದ್ದರು. ಈ ಸಂದರ್ಭದಲ್ಲಿ ಅವರ ಕುಟುಂಬದ ಖಾಸಗಿತನಕ್ಕೆ ಯಾರೂ ಧಕ್ಕೆ ತರಬಾರದೆಂದು ಮನವಿ ಮಾಡುತ್ತಿದ್ದೇವೆ ಎಂದು ಸುರೇಖಾರ ಮ್ಯಾನೇಜರ್​ ಮಾಹಿತಿ ನೀಡಿದ್ದಾರೆ.

1978ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದ ಸುರೇಖಾ ಮೊದಲ ಬಾರಿಗೆ ಕಿಸ್ಸಾ ಕುರ್ಸಿ ಕಾ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಮೂರು ಬಾರಿ ಅತ್ಯುತ್ತಮ ಪೋಷಕ ನಟಿ ಪಾತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. 1988ರ ತಮಾಸ್​, 1995ರ ಮಮ್ಮೋ ಹಾಗೂ 2018ರ ಬದಾಯಿ ಹೋ ಸಿನಿಮಾ ಸುರೇಖಾರಿಗೆ ರಾಷ್ಟ್ರೀಯ ಪ್ರಶಸ್ತಿ ತಂದುಕೊಟ್ಟ ಚಿತ್ರಗಳಾಗಿವೆ. ಹಿಂದಿ ಕಿರುತೆರೆಯ ಪ್ರಖ್ಯಾತ ಧಾರವಾಹಿ ಬಾಲಿಕಾ ವಧುವಿನಲ್ಲೂ ಸುರೇಖಾ ಸಿಕ್ರಿ ನಟಿಸಿ ತಮ್ಮ ಪಾತ್ರದ ಮೂಲಕ ಮನೆ ಮಾತಾಗಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...