ಮುಂಬೈ: ಭಾರತದ 1938ರ ಸಮಯದಲ್ಲಿ ರಚಿತವಾಗಿದ್ದ ಪ್ರಸಿದ್ಧ ಚಿತ್ರಕಲೆ 37.8 ಕೋಟಿ ರೂ.ಗಳಿಗೆ ಮುಂಬೈನಲ್ಲಿ ಸ್ಯಾಫ್ರನ್ ಆರ್ಟ್ ನಡೆಸಿದ ಹರಾಜಿನಲ್ಲಿ ಮಾರಾಟವಾಗಿದೆ.
ಹೆಸರಾಂತ ಹಂಗೇರಿಯನ್-ಭಾರತೀಯ ವರ್ಣಚಿತ್ರಕಾರೆಯಾಗಿದ್ದ ಅಮೃತಾ ಶೆರ್ ಗಿಲ್ ಅವರು ಚಿತ್ರಿಸಿದ್ದ ಪೈಂಟಿಂಗ್ ಇದಾಗಿದೆ. ಈ ಮೂಲಕ ಜಾಗತಿಕವಾಗಿ ಮಾರಾಟವಾದ 2ನೇ ಅತ್ಯಂತ ದುಬಾರಿ ಮೊತ್ತದ ಭಾರತೀಯ ಚಿತ್ರಕಲೆ ಇದಾಗಿದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
20ನೇ ಶತಮಾನ ಆರಂಭದ ಶ್ರೇಷ್ಠ ಮಹಿಳಾ ಕಲಾವಿದರಲ್ಲಿ ಅಮೃತ ಶೆರ್ ಗಿಲ್ ಕೂಡ ಒಬ್ಬರು. ತಮ್ಮ ಚಿಕ್ಕ ವಯಸ್ಸಿನಲ್ಲೇ ಇವರು ಚಿತ್ರಕಲೆಯತ್ತ ಆಸಕ್ತಿ ಬೆಳೆಸಿಕೊಂಡಿದ್ದರು.
ಸೋಂಕಿದ್ದರೂ ನೆಗೆಟಿವ್ ಬರ್ತಿದೆ RT-PCR ಪರೀಕ್ಷಾ ವರದಿ….!
‘’ಅಮೃತ ಶೇರ್ ಗಿಲ್ ಅವರ ಕೌಶಲ್ಯ ಮತ್ತು ಪ್ರತಿಭೆಗೆ ಇವರ ಚಿತ್ರಕಲೆಯೇ ಸಾಕ್ಷಿಯಾಗಿದೆ. ಈ ಚಿತ್ರಕಲೆಯು ಕಲಾವಿದೆಯ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಎತ್ತಿ ತೋರಿಸುತ್ತದೆ’’ ಎಂದು ಸ್ಯಾಫ್ರನ್ ಆರ್ಟ್ ಸಿಇಒ ಮತ್ತು ಸಹ-ಸಂಸ್ಥಾಪಕ ದಿನೇಶ್ ವಾಜಿರಾನಿ ತಿಳಿಸಿದ್ದಾರೆ.
ನಕಲಿ ಲಸಿಕೆ ಅಭಿಯಾನದಲ್ಲಿ ಮೊದಲ ಡೋಸ್ ಪಡೆದಿದ್ದ ಮಹಿಳೆಗೆ ಕೊರೊನಾ ಸೋಂಕು: ಆಸ್ಪತ್ರೆಗೆ ದಾಖಲು
ಇನ್ನು ಇದುವರೆಗೆ ಮಾರಾಟವಾದ ಅತ್ಯಂತ ದುಬಾರಿ ಭಾರತೀಯ ಚಿತ್ರಕಲೆ 39.98 ಕೋಟಿ ರೂ.ಗೆ ಈ ವರ್ಷದ ಮಾರ್ಚ್ ನಲ್ಲಿ ಮಾರಾಟವಾಗಿತ್ತು. ವಿ.ಎಸ್. ಗಾಯ್ತೊಂಡೆ ಅವರ ಶೀರ್ಷಿಕೆ ರಹಿತವಾದ ಪೇಂಟಿಂಗ್ ಇದಾಗಿತ್ತು.