alex Certify ಕೊರೊನಾ ಮಧ್ಯೆಯೇ ಹೆಚ್ಚುತ್ತಿದೆ ‘ಝಿಕಾ’ ಆತಂಕ: ಒಂದೇ ದಿನದಲ್ಲಿ ಐದು ಪ್ರಕರಣಗಳು ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಮಧ್ಯೆಯೇ ಹೆಚ್ಚುತ್ತಿದೆ ‘ಝಿಕಾ’ ಆತಂಕ: ಒಂದೇ ದಿನದಲ್ಲಿ ಐದು ಪ್ರಕರಣಗಳು ಪತ್ತೆ

ಕೊರೊನಾ ಆತಂಕದ ನಡುವೆಯೇ ಕೇರಳದಲ್ಲಿ ಝಿಕಾ ವೈರಸ್​ ಭಯ ಕೂಡ ಶುರುವಾಗಿದೆ. ಐದು ದಿನಗಳ ಹಿಂದಷ್ಟೇ ಮಹಿಳೆಯೊಬ್ಬರಲ್ಲಿ ಝಿಕಾ ವೈರಸ್​ ಸೋಂಕು ಕಂಡು ಬಂದಿತ್ತು. ಇದೀಗ ಕೇರಳದಲ್ಲಿ ಇನ್ನೂ ಐದು ಹೊಸ ಝಿಕಾ ಪ್ರಕರಣಗಳು ಬೆಳಕಿಗೆ ಬಂದಿದ್ದು ಒಟ್ಟು ಝಿಕಾ ಸೋಂಕಿತರ ಸಂಖ್ಯೆ 28 ಆಗಿದೆ ಎಂದು ಕೇರಳ ಆರೋಗ್ಯ ಸಚಿವ ವೀಣಾ ಜಾರ್ಜ್ ಹೇಳಿದ್ದಾರೆ.

ಈ ಐದು ಹೊಸ ಝಿಕಾ ಪ್ರಕರಣಗಳಲ್ಲಿ ಇಬ್ಬರು ಸೋಂಕಿತರು ಅನಾಯರಾ, ಹಾಗೂ ಉಳಿದ ಮೂವರು ಕುನ್ನುಕುಜಿ, ಪಾಟ್ಟೋಮ್​ ಮತ್ತು ಈಸ್ಟ್​ ಫೋರ್ಟ್​ಗೆ ಸೇರಿದವರಾಗಿದ್ದಾರೆ. ಸೊಳ್ಳೆಯಿಂದ ಹರಡುತ್ತಿರುವ ಈ ರೋಗವನ್ನ ತಡೆಗಟ್ಟುವ ಸಲುವಾಗಿ ತಿರುವನಂತಪುರಂ ಮುನ್ಸಿಪಾಲ್​ ಕಚೇರಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದೆ.

ಕೇರಳದಲ್ಲಿ ಮೊಟ್ಟ ಮೊದಲ ಝಿಕಾ ಪ್ರಕರಣವು ಜುಲೈ 9ರಂದು ಬೆಳಕಿಗೆ ಬಂದಿತ್ತು. ಇದಾದ ಬಳಿಕ ಕೇರಳದ ಎಲ್ಲಾ ಜಿಲ್ಲೆಗಳಲ್ಲಿ ಹೈ ಅರ್ಲಟ್​​ ಘೋಷಣೆ ಮಾಡಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...