alex Certify ಮದುವೆ ಮಂಟಪದಲ್ಲೇ ನಿದ್ರೆಗೆ ಜಾರಿದ ವರ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಮಂಟಪದಲ್ಲೇ ನಿದ್ರೆಗೆ ಜಾರಿದ ವರ…..!

ಭಾರತದಲ್ಲಿ ಮದುವೆಗಳು ಅದ್ಧೂರಿಯಾಗಿ ನಡೆಯುತ್ತವೆ. ಕೆಲವು ಮದುವೆಗಳು ಐದು ದಿನಗಳ ಕಾಲ ನಡೆಯುತ್ತವೆ. ಮದುವೆ ಸಂಭ್ರಮ, ಮನೆ ತುಂಬ ಜನ, ಆಚರಣೆ ಮಧ್ಯೆ ವಧು-ವರರಿಗೆ ಆಯಾಸವಾಗುವುದು ಸಾಮಾನ್ಯ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಅದ್ರಲ್ಲಿ ಮದುವೆ ಆಚರಣೆಯಲ್ಲಿ ವರ ಎಷ್ಟು ಸುಸ್ತಾಗಿದ್ದಾನೆಂಬುದು ಸ್ಪಷ್ಟವಾಗುತ್ತದೆ.

ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆದ ವಿಡಿಯೋದಲ್ಲಿ ವಧು-ವರ ವೇದಿಕೆ ಮೇಲೆ ಕುಳಿತಿದ್ದಾರೆ. ವರ ಅಲ್ಲಿಯೇ ನಿದ್ರೆಗೆ ಜಾರಿದ್ದಾನೆ. ಅಕ್ಕಪಕ್ಕದಲ್ಲಿರುವವರು ಆತನನ್ನು ಎಚ್ಚರಗೊಳಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಕೆಲವರು ಕೈ-ಮೈ ಮುಟ್ಟಿ ಎಚ್ಚರಗೊಳಿಸಲು ಪ್ರಯತ್ನಿಸಿದ್ರೆ ಮತ್ತೆ ಕೆಲವರು ಕೂಗ್ತಿದ್ದಾರೆ. ಆದ್ರೆ ವರ ಮಾತ್ರ ನಿದ್ರೆಯಿಂದ ಎಚ್ಚರಗೊಳ್ತಿಲ್ಲ.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋವನ್ನು 2 ಲಕ್ಷ 79 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಅನೇಕರು ಇದ್ರ ಬಗ್ಗೆ ಕಮೆಂಟ್ ಮಾಡಿದ್ದಾರೆ. ಕೆಲವರು ಇಂದು ರಾತ್ರಿ ವರನಿಗೆ ರೂಂ ಪ್ರವೇಶ ನಿಶಿದ್ಧವೆಂದ್ರೆ ಮತ್ತೆ ಕೆಲವರು, ತನ್ನ ಮದುವೆಯಲ್ಲೇ ವರ ಯಾಕೆ ಇಷ್ಟು ಮದ್ಯಪಾನ ಮಾಡಿದ್ದಾನೆಂದು ಪ್ರಶ್ನಿಸಿದ್ದಾರೆ.

bride groom video goes viral man sleeping on wedding video | Wedding Video:  शादी की स्टेज पर ही सो गया दूल्हा, जगाने की कोशिश में जुटे लोग | Hindi  News, जरा हटके

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...