ನವದೆಹಲಿ: ಜುಲೈ 22 ರಿಂದ ಮುಂದಿನ ಆದೇಶದವರೆಗೆ ಹೊಸ ಗ್ರಾಹಕರನ್ನು(ಡೆಬಿಟ್, ಕ್ರೆಡಿಟ್ ಅಥವಾ ಪ್ರಿಪೇಯ್ಡ್) ತನ್ನ ನೆಟ್‌ವರ್ಕ್‌ನಲ್ಲಿ ತರಲು ಮಾಸ್ಟರ್‌ಕಾರ್ಡ್ ಗೆ ಅನುಮತಿಸಲಾಗುವುದಿಲ್ಲ ಎಂದು ಹೇಳಲಾಗಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿರ್ಬಂಧ ವಿಧಿಸಿದ್ದು, ಭಾರತದಲ್ಲಿ ಹೊಸ ಗ್ರಾಹಕರನ್ನು ಮಾಸ್ಟರ್ ಕಾರ್ಡ್ ಗೆ ಸೇರಿಸದಂತೆ ನಿರ್ದೇಶಿಸಲಾಗಿದೆ. ಮಾಸ್ಟರ್ ಕಾರ್ಡ್ ಏಷ್ಯಾ- ಪೆಸಿಫಿಕ್ ಪಿಟಿ ಮೇಲೆ ನಿರ್ಬಂಧ ವಿಧಿಸಲಾಗಿದೆ. 2021ರ ಜುಲೈ 22 ರಿಂದ ಹೊಸ ದೇಶಿಯ ಗ್ರಾಹಕರಿಗೆ ಮಾಸ್ಟರ್ ಕಾರ್ಡ್ ಗೆ ನಿರ್ಬಂಧ ವಿಧಿಸಲಾಗಿದೆ. ಕ್ರೆಡಿಟ್, ಡೆಬಿಟ್ ಅಥವಾ ಪ್ರಿಪೇಯ್ಡ್ ಕಾರ್ಡ್ ನೆಟ್ವರ್ಕ್ ಇದು ಅನ್ವಯವಾಗಲಿದೆ.
ಆರ್ಬಿಐ ಹಲವಾರು ಬಾರಿ ಸೂಚನೆ ನೀಡಿದ್ದರೂ, ಪಾವತಿ ವ್ಯವಸ್ಥೆಯ ಡೇಟಾ ಸಂಗ್ರಹಣೆಯ ನಿರ್ದೇಶನ ಪಾಲಿಸದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಅಸ್ತಿತ್ವದಲ್ಲಿರುವ ಗ್ರಾಹಕರ ಮೇಲೆ ಈ ಆದೇಶ ಪರಿಣಾಮ ಬೀರುವುದಿಲ್ಲ ಎಂದು ಸೆಂಟ್ರಲ್ ಬ್ಯಾಂಕ್ ತಿಳಿಸಿದೆ.
ಈ ನಿರ್ದೇಶನಕ್ಕೆ ಅನುಗುಣವಾಗಿ ಎಲ್ಲಾ ಕಾರ್ಡ್ ನೀಡುವ ಬ್ಯಾಂಕುಗಳು ಮತ್ತು ಬ್ಯಾಂಕೇತರ ಮಾಸ್ಟರ್ ಕಾರ್ಡ್ ಬಗ್ಗೆ ಗ್ರಾಹಕರಿಗೆ ಸಲಹೆ ನೀಡಬೇಕಿದೆ.
ಮಾಸ್ಟರ್‌ಕಾರ್ಡ್ ಪಿಎಸ್‌ಎಸ್ ಕಾಯ್ದೆಯಡಿ ದೇಶದಲ್ಲಿ ಕಾರ್ಡ್ ನೆಟ್‌ವರ್ಕ್ ನಿರ್ವಹಿಸಲು ಅಧಿಕಾರ ಹೊಂದಿರುವ ಪಾವತಿ ವ್ಯವಸ್ಥೆ ಆಪರೇಟರ್ ಆಗಿದೆ. ಪಾವತಿ ವ್ಯವಸ್ಥೆಗಳ ಡೇಟಾವನ್ನು ಸಂಗ್ರಹಿಸುವ ಮಾನದಂಡಗಳ ಉಲ್ಲಂಘನೆ ಕಾರಣಕ್ಕೆ ಆರ್.ಬಿ.ಐ. ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.