ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ಬಹಳ ವರ್ಷಗಳ ಬ್ರೇಕ್ ನಂತರ, ಅಭಿನಯಸಿರುವ ಬಹು ನಿರೀಕ್ಷಿತ ಚಿತ್ರ ‘ಹಂಗಾಮ-2’ ತೆರೆಗೆ ಬರಲು ಸಜ್ಜಾಗಿದೆ. ಚಿತ್ರ ಬಿಡುಗಡೆಗೆ ಮೊದಲೇ ಶಿಲ್ಪಾ ಶೆಟ್ಟಿ, ನಿರ್ಮಾಪಕ ಪ್ರಿಯದರ್ಶನ್ ಹಾಗೂ ಸಹನಟ ಪರೇಶ್ ರಾವಲ್ ಜೊತೆ ಕೆಲಸ ಮಾಡಿದ ಅನುಭವದ ಬಗ್ಗೆ ಮಾತನಾಡಿದ್ದಾರೆ.
‘ಹಂಗಾಮಾ-2’ ಒಂದು ಹಾಸ್ಯಪ್ರಧಾನ ಚಿತ್ರವಾಗಿದ್ದು, ಇಂತಹ ಕಷ್ಟದ ಸಮಯದಲ್ಲಿ ಮನೋಲ್ಲಾಸಕ್ಕೆ ಹಾಸ್ಯವು ಇರುವುದು ಅವಶ್ಯಕವಾಗಿದೆ. ಖಂಡಿತ ಜನರು ಈ ಚಿತ್ರವನ್ನು ಇಷ್ಟಪಡುತ್ತಾರೆ ಎಂದು ಶಿಲ್ಪಾಶೆಟ್ಟಿ ಹೇಳಿದ್ರು.
‘5ಡಿ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್
‘’ಚಿತ್ರದ ಬಗ್ಗೆ ನಾನು ಎಷ್ಟು ಉತ್ಸುಕಳಾಗಿದ್ದೇನೆ ಎಂಬುದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ನಾನು ಯಾವಾಗಲೂ ಪರೇಶ್ ಹಾಗೂ ಪ್ರಿಯದರ್ಶನ್ ಅವರೊಂದಿಗೆ ಕೆಲಸ ಮಾಡಲು ಬಯಸುತ್ತೇನೆ’’ ಎಂದು ಅವರು ಹೇಳಿದ್ದಾರೆ. ಅಲ್ಲದೆ ತನ್ನ ಮೊದಲ ಚಿತ್ರ ‘ಬಾಜಿಗರ್’ನ ಭಾಗವಾಗಿದ್ದ ಜಾನಿ ಲಿವರ್ ಅವರ ಜತೆ ಈ ಚಿತ್ರದ ಮೂಲಕ ಮತ್ತೆ ಒಂದಾಗಿದ್ದಕ್ಕೆ ಶಿಲ್ಪಾ ಹರ್ಷ ವ್ಯಕ್ತಪಡಿಸಿದ್ದಾರೆ. ಜಾನಿ ಮತ್ತು ರಾಜ್ ಪಾಲ್ ಇಬ್ಬರೂ ಅಸಾಧಾರಣ ಕಲಾವಿದರು. ಇವರ ಜತೆ ಕೆಲಸ ಮಾಡಿರುವುದು ಖುಷಿ ಕೊಟ್ಟಿದೆ. ಇಂತಹ ಉತ್ತಮ ಕಲಾವಿದರಿಂದ ಕಲಿಯುವುದು ಬಹಳಷ್ಟಿದೆ ಎಂದು ಹೇಳಿದ್ದಾರೆ.
2003ರಲ್ಲಿ ಬಿಡುಗಡೆಯಾಗಿದ್ದ ಪ್ರಿಯದರ್ಶನ್ ಅವರ ಹಂಗಾಮಾ ಚಿತ್ರದ ಮುಂದುವರಿದ ಭಾಗ ಇದಾಗಿದೆ. ಈ ಸಿನಿಮಾದಲ್ಲಿ ನಟರಾದ ಮೀಜಾನ್ ಜಾಫ್ಫಿ, ಪ್ರಣಿತಾ ಸುಭಾಷ್, ರಾಜ್ ಪಾಲ್ ಯಾದವ್ ಮತ್ತು ಅಶುತೋಷ್ ರಾಣಾ ಅವರು ಕೂಡ ನಟಿಸಿದ್ದಾರೆ. ಜುಲೈ 23ರಂದು ಡಿಸ್ನಿ+ಹಾಟ್ ಸ್ಟಾರ್ ಹಾಗೂ ಡಿಸ್ನಿ+ಹಾಟ್ ಸ್ಟಾರ್ ಪ್ರೀಮಿಯಂ ಮೂಲಕ ಚಂದಾದಾರರಿಗೆ ಬಿಡುಗಡೆ ಮಾಡಲು ಚಿತ್ರ ತಂಡ ಸಜ್ಜಾಗಿದೆ