alex Certify ಹುಲಿ ದಾಳಿಯಿಂದ ಯುವಕನ ಬಚಾವ್ ಮಾಡಿತು ‘ಹೆಲ್ಮೆಟ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಲಿ ದಾಳಿಯಿಂದ ಯುವಕನ ಬಚಾವ್ ಮಾಡಿತು ‘ಹೆಲ್ಮೆಟ್’

ಬರೇಲಿ: ಹೆಲ್ಮೆಟ್ ಧರಿಸಿದ ಕಾರಣದಿಂದ ಹುಲಿ ದಾಳಿಯಿಂದ 23 ವರ್ಷದ ಯುವಕನೊಬ್ಬ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಫಿಲಿಬತ್ ನ ವ್ಯಕ್ತಿ ಹುಲಿ ದಾಳಿಯಿಂದ ಪಾರಾಗಿದ್ದಾನೆ. ಅದೃಷ್ಟವಶಾತ್ ಈತ ಹೆಲ್ಮೆಟ್ ಧರಿಸಿದ್ದರಿಂದ ತಲೆಯೆಂದು ತಿಳಿದ ಹುಲಿ ಹೆಲ್ಮೆಟ್ ಗೆ ಕಚ್ಚತೊಡಗಿದೆ. ಹೀಗಾಗಿ ಈತ ಬಚಾವಾಗಿದ್ದಾನೆ.

ಯುವಕನನ್ನು ವಿಕಾಸ್ ಎಂದು ಗುರುತಿಸಲಾಗಿದೆ. ಈತ ಸೋನು ಮತ್ತು ಕಂಧೈ ಲಾಲ್ ಎಂಬ ಇಬ್ಬರು ಸ್ನೇಹಿತರ ಜೊತೆ ಬೈಕಿನಲ್ಲಿ ಕಾಡು ದಾರಿಯಲ್ಲಿ ಮನೆಗೆ ತೆರಳುತ್ತಿದ್ದರು.

ಈ ವೇಳೆ ಬೈಕ್ ನ ಹೆಡ್ ಲೈಟ್ ಸರಿಯಾಗಿ ಕಾಣಿಸುತ್ತಿಲ್ಲವಾದ್ದರಿಂದ ಹುಲಿ ಬಂದಿರುವುದು ಇವರಿಗೆ ತಿಳಿದಿಲ್ಲ. ನೋಡನೋಡುತ್ತಿದ್ದಂತೆ ಎರಡು ಹುಲಿಗಳು ಈ ಮೂವರ ಮೇಲೆರಗಿದೆ. ವಿಕಾಸ್ ತಲೆಗೆ ಹೆಲ್ಮೆಟ್ ಹಾಕಿದ್ದರಿಂದ ತಲೆ ಎಂದು ತಿಳಿದ ಹುಲಿ ಹೆಲ್ಮೆಟ್ ಹಿಡಿದುಕೊಂಡಿದೆ. ಭಯದಿಂದ ವಿಕಾಸ್ ಮರದ ಮೇಲೆ ಹತ್ತಿದ್ದು, ರಾತ್ರಿ ಪೂರ್ತಿ ಕಾಡಿನಲ್ಲೇ ಕಾಲ ಕಳೆಯುವಂತಾಯಿತು.

BIG NEWS: ಆಗಸ್ಟ್ ನಲ್ಲಿ ಬದಲಾಗಲಿದೆ ಅಂಚೆ ಕಚೇರಿಯ ಈ ನಿಯಮ

ಆದರೆ, ಗೆಳೆಯ ಸೋನು ನನ್ನು ವಿಕಾಸ್ ಕಣ್ಣಮುಂದೆಯೇ ಹುಲಿಗಳು ಕೊಂದವು. ‘’ಇದರಿಂದ ಭಯಗೊಂಡಿದ್ದ ನಾನು ತುಂಬಾ ಹೆದರಿದೆ. ಬಳಿಕ ಇನ್ನೊಂದು ಮರದ ಮೇಲೆ ಹಾರಿ ಕುಳಿತೆ. ಅಲ್ಲಿಂದ ಸ್ವಲ್ಪವೂ ಚಲಿಸಲಿಲ್ಲ. ಹುಲಿಗಳಿಗೆ ನಾನಿರುವ ಸ್ಥಳ ಗೊತ್ತಾದರೆ ನನಗೂ ಅಪಾಯ ಒದಗುತ್ತದೆ ಎಂದು ಕಣ್ಣುಮುಚ್ಚಿ ಪ್ರಾರ್ಥಿಸಲು ಆರಂಭಿಸಿದೆ’’ ಎಂದು ಹೇಳಿದ್ದಾನೆ.

ಬೆಳಗಾಗುತ್ತಲೇ ವಿಕಾಸ್ ನನ್ನು ಸ್ಥಳೀಯ ವ್ಯಕ್ತಿ ಗುರುತಿಸಿ ಸಂಬಂಧಪಟ್ಟವರಿಗೆ ಮಾಹಿತಿ ನೀಡಿ, ಈತನನ್ನು ರಕ್ಷಿಸಲಾಯಿತು. ಈ ವೇಳೆ ವಿಕಾಸ ಬಹಳ ಭೀತಿಗೊಂಡಿದ್ದು, ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಲಾಗಿದೆ. ಇನ್ನು ವಿಕಾಸ್ ಗೆಳೆಯ ಕಂಧೈನ ಮೃತ ದೇಹವು ಅರೆಬರೆ ಸ್ಥಿತಿಯಲ್ಲಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...