ಅಂಚೆ ಕಚೇರಿಯಲ್ಲಿ ಖಾತೆ ಹೊಂದಿರುವವರಿಗೆ ಮಹತ್ವದ ಸುದ್ದಿಯೊಂದಿದೆ. ಆಗಸ್ಟ್ ನಲ್ಲಿ ಅಂಚೆ ಕಚೇರಿ ಈ ನಿಯಮದಲ್ಲಿ ಬದಲಾವಣೆಯಾಗ್ತಿದೆ. ಅಂಚೆ ಕಚೇರಿಯಲ್ಲಿ ಖಾತೆ ಹೊಂದಿರುವ ಗ್ರಾಹಕರು ಮನೆ ಬಾಗಿಲಿನ ಬ್ಯಾಂಕಿಂಗ್ ಸೌಲಭ್ಯಕ್ಕೆ ಹಣ ನೀಡಬೇಕು.
ಆಗಸ್ಟ್ 1, 2021 ರಿಂದ, ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಗ್ರಾಹಕರು ಮನೆ ಬಾಗಿಲಿನ ಬ್ಯಾಂಕಿಂಗ್ ಶುಲ್ಕವಾಗಿ ಪ್ರತಿ ಸೇವೆಗೆ 20 ರೂಪಾಯಿ ನೀಡಬೇಕು. ಜುಲೈನಲ್ಲಿ ಖಾತೆದಾರರಿಗೆ ಶಾಕ್ ಸಿಕ್ಕಿದೆ. ಬಡ್ಡಿ ದರದಲ್ಲಿ ಇಳಿಕೆಯಾಗಿದೆ. ಮೊದಲು ಒಂದು ಲಕ್ಷ ರೂಪಾಯಿಗೆ ಶೇಕಡಾ 2.75 ರೂಪಾಯಿ ಬಡ್ಡಿ ಸಿಗ್ತಿತ್ತು. ಬೇಸಿಕ್ ಪಾಯಿಂಟ್ 25ರಷ್ಟು ಇಳಿಕೆಯಾಗಿದ್ದು, ಈಗ ಶೇಕಡಾ 2.50ರಷ್ಟು ಬಡ್ಡಿ ಸಿಗಲಿದೆ. ಆದ್ರೆ ಒಂದರಿಂದ 2 ಲಕ್ಷದವರೆಗೆ ಬ್ಯಾಲೆನ್ಸ್ ಹೊಂದಿರುವ ಗ್ರಾಹಕರಿಗೆ ಶೇಕಡಾ 2.75ರ ದರದಲ್ಲಿ ಬಡ್ಡಿ ಸಿಗಲಿದೆ. ಅಂಚೆ ಕಚೇರಿ ಸೇವೆ ಪಡೆಯಲು ಸ್ಥಳೀಯ ಅಂಚೆ ಶಾಖೆಗೆ ತೆರಳಬಹುದು. ಆನ್ಲೈನ್ ಮೂಲಕವೂ ನೀವು ವ್ಯವಹಾರ ನಡೆಸಬಹುದು.
ಐಪಿಪಿಬಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಬೇಕಾಗುತ್ತದೆ. ಅಲ್ಲಿ ಓಪನ್ ಅಕೌಂಟ್ ಕ್ಲಿಕ್ ಮಾಡಬೇಕು. ಮೊಬೈಲ್ ಸಂಖ್ಯೆ ಮತ್ತು ಪಾನ್ ನಂಬರ್ ನಮೂದಿಸಬೇಕು. ನಂತ್ರ ಆಧಾರ್ ಸಂಖ್ಯೆ ನಮೂದಿಸಬೇಕು. ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಅಲ್ಲಿ ಹೆಸರು, ಶೈಕ್ಷಣಿಕ ಅರ್ಹತೆ, ವಿಳಾಸ ಮತ್ತು ನಾಮನಿರ್ದೇಶನ ವಿವರಗಳಂತಹ ಕೆಲವು ವೈಯಕ್ತಿಕ ವಿವರಗಳನ್ನು ನಮೂದಿಸಬೇಕು. ಅರ್ಜಿ ಸಲ್ಲಿಸಿದ ನಂತ್ರ ಪರಿಶೀಲನೆ ನಡೆಸಿ ಖಾತೆ ತೆರೆಯಲು ಅನುಮತಿ ನೀಡಲಾಗುವುದು.