ಮೈಸೂರು: ಕೆ.ಆರ್.ಎಸ್ ಡ್ಯಾಂ ಬಿರುಕು ಹೇಳಿಕೆ ವಿವಾದ ಮುಂದುವರೆದಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಲು ಮುಂದಾಗಿರುವ ಸಂಸದೆ ಸುಮಲತಾ ನನ್ನ ಹೆಳಿಕೆಯನ್ನು ಬೇರೆ ರೀತಿ ಅರ್ಥೈಸಲಾಗುತ್ತಿದೆ ಎಂದು ಹೇಳಿದ್ದಾರೆ.
ಕೆ.ಆರ್.ಎಸ್. ಗೆ ಭೇಟಿ ನೀಡಿ ಪರಿಶೀಲನೆಗೆ ಮುಂದಾಗಿರುವ ಸುಮಲತಾ, ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಕೆ.ಆರ್.ಎಸ್. ಬಿರುಕು ಬಿಟ್ಟಿದೆ ಎಂದು ಹೇಳಿಲ್ಲಾ, ಬಿರುಕು ಬಿಟ್ಟಿದ್ಯಾ ಎಂದು ಸಭೆಯಲ್ಲಿ ಪ್ರಶ್ನಿಸಿದ್ದೆ. ಅಕ್ರಮ ಗಣಿಗಾರಿಕೆಯಿಂದಾಗಿ ಕೆ.ಆರ್.ಎಸ್. ಬಿರುಕು ಬಿಡುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದೆ. ಆದರೆ ನನ್ನ ಆತಂಕ ಬೇರೆ ರೀತಿ ಅರ್ಥೈಸಿ ರಾದ್ದಾಂತ ಮಾಡಲಾಗುತ್ತಿದೆ ಎಂದಿದ್ದಾರೆ.
ಮನೆಯಲ್ಲೇ ಕುಳಿತು ಈಕೆ ತಿಂಗಳಿಗೆ ಗಳಿಸ್ತಿದ್ದಾಳೆ 41 ಲಕ್ಷ ರೂ.
ಮಂಡ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ನಾನು ಅಕ್ರಮಗಳನ್ನು ಬಯಲಿಗೆಳೆಯಲು ಯತ್ನಿಸುತ್ತಿದ್ದೇನೆ. ಡ್ಯಾಂ ನ 20 ಕೀ.ಮೀ. ಸುತ್ತ ಸ್ಫೋಟ ಮಾಡುವಂತಿಲ್ಲ. ಈ ಪ್ರದೇಶದಲ್ಲಿ ಅಕ್ರಮ-ಸಕ್ರಮ ಪ್ರಶ್ನೆ ಬರಲ್ಲ. ಗಣಿಗಾರಿಕೆಯಿಂದ ಡ್ಯಾಂ ನಲ್ಲಿ ಕಂಪನ ದಾಖಲಾಗಿದೆ. ಈ ಸಂಬಂಧ ಅಧಿಕೃತ ದಾಖಲೆಗಳೂ ಇವೆ. ಈ ಬಗ್ಗೆ ಸ್ವತಂತ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.