ಜಮ್ಮು: ಜಮ್ಮು ಮತ್ತು ಕಾಶ್ಮೀರದ ಆರ್ನಿಯಾ ಪ್ರದೇಶದಲ್ಲಿ ಪಾಕಿಸ್ತಾನದ ಡ್ರೋಣ್ ಹಾರಾಟ ನಡೆಸಿದೆ. ಅಂತರರಾಷ್ಟ್ರೀಯ ಗಡಿಯಲ್ಲಿ ಡ್ರೋಣ್ ಪತ್ತೆಯಾಗಿದ್ದು, ಇದನ್ನು ಗಮನಿಸಿದ ಬಿಎಸ್ಎಫ್ ಯೋಧರು ಫೈರಿಂಗ್ ಮಾಡಿದ್ದಾರೆ. ಐದಾರು ಸುತ್ತು ಫೈರಿಂಗ್ ಮಾಡಲಾಗಿದ್ದು, ನಂತರ ದ್ರೋಣ ಪಾಕಿಸ್ತಾನದ ಕಡೆಗೆ ಮರಳಿದೆ.
ತಡರಾತ್ರಿ ಆರ್ನಿಯಾ ಸೆಕ್ಟರ್ ಬಳಿ ಡ್ರೋಣ್ ಹಾರಾಟ ನಡೆಸುತ್ತಿರುವುದು ಪತ್ತೆಯಾಗಿದೆ. ಬಿಎಸ್ಎಫ್ ಯೋಧರು ಫೈರಿಂಗ್ ಮಾಡಿದ ನಂತರ ಮರಳಿದೆ. ಇತ್ತೀಚೆಗಷ್ಟೇ ಭಾರತೀಯ ವಾಯು ನಿಲ್ದಾಣಕ್ಕೆ ಸ್ಪೋಟಕಗಳಿದ್ದ 2 ಡ್ರೋಣ್ ಅಪ್ಪಳಿಸಿದ್ದವು. ನಂತರ ಆಗಾಗ ಡ್ರೋಣ್ ಹಾರಾಡುತ್ತಿದ್ದು, ಅವಗಳನ್ನು ಹೊಡೆದುರುಳಿಸಲಾಗಿದೆ. ಜಮ್ಮುವಿನಲ್ಲಿ ಡ್ರೋಣ್ ಪತ್ತೆಯಾಗಿರುವುದು ಇದು ಆರನೇ ಬಾರಿಯಾಗಿದೆ. ಜಮ್ಮುವಿನಲ್ಲಿ ಹೆಚ್ಚಿರುವ ಡ್ರೋಣ್ ಗಳ ಹಾರಾಟಕ್ಕೆ ಕಡಿವಾಣ ಹಾಕಲು ಬಿಗಿ ಕ್ರಮ ಕೈಗೊಳ್ಳಲಾಗಿದೆ.