ನೀವು ಇಂದು ಚಲಾವಣೆಯಲ್ಲಿಲ್ಲದ ಅಪರೂಪದ ಅಥವಾ ವಿಶೇಷ ನಾಣ್ಯಗಳು ಮತ್ತು ಕರೆನ್ಸಿ ನೋಟುಗಳನ್ನು ಸಂಗ್ರಹಿಸುವವರಾಗಿದ್ದರೆ, ಅವುಗಳನ್ನು ಹರಾಜು ಮಾಡಲು ಮತ್ತು ಹಣವನ್ನು ಸಂಪಾದಿಸಲು ನಿಮಗೆ ಅವಕಾಶವಿದೆ.
ಇತ್ತೀಚಿನ ದಿನಗಳಲ್ಲಿ 1 ಮತ್ತು 2 ರೂ. ನಾಣ್ಯಗಳು ಮತ್ತು 1, 2 ಮತ್ತು 5 ರೂ ನೋಟುಗಳನ್ನು ಆನ್ಲೈನ್ನಲ್ಲಿ ಸಾವಿರಾರು ರೂಪಾಯಿಗೆ ಹರಾಜು ಮಾಡಬಹುದು. 1 ರೂ. ನೋಟೊಂದಕ್ಕೆ 7 ಲಕ್ಷ ರೂ. ಪಡೆಯಬಹುದು. ನೀವು ಅಪರೂಪದ 1 ರೂ. ನೋಟ್ ಹೊಂದಿದ್ದರೆ, ದೊಡ್ಡ ಮೊತ್ತವನ್ನು ಗಳಿಸಬಹುದು ಎನ್ನಲಾಗಿದೆ.
ಸುಮಾರು 26 ವರ್ಷಗಳ ಹಿಂದೆ ಭಾರತ ಸರ್ಕಾರ 1 ರೂ ನೋಟ್ ಸ್ಥಗಿತಗೊಳಿಸಿತ್ತು. ಆದರೆ, ಅದನ್ನು 2015 ರ ಜನವರಿಯಲ್ಲಿ ಮರುಮುದ್ರಣ ಮಾಡಲಾಯಿತು. ನಂತರ ಅದನ್ನು ಮಾರುಕಟ್ಟೆಯಲ್ಲಿ ಹೊಸ ರೂಪದಲ್ಲಿ ಪರಿಚಯಿಸಲಾಯಿತು. ಆದಾಗ್ಯೂ, ನಿಮ್ಮನ್ನು ಕೋಟ್ಯಧಿಪತಿಯನ್ನಾಗಿ ಮಾಡುವ ನೋಟು ಸ್ವಾತಂತ್ರ್ಯ ಪೂರ್ವದದಿಂದಲೂ ಬಂದಿದೆ.
ಈ ವಿಶೇಷ 1 ರೂ. ನೋಟನ್ನು 1935 ರಲ್ಲಿ ಬ್ರಿಟಿಷ್ ಆಡಳಿತದಲ್ಲಿ ಪರಿಚಯಿಸಲಾಯಿತು. ಇದು ಅಂದಿನ ಗವರ್ನರ್ ಜೆ. ಡಬ್ಲ್ಯೂ. ಕೆಲ್ಲಿಯ ಚಿಹ್ನೆ ಹೊಂದಿದೆ. 1957 ರ 1 ರೂ. ಕರೆನ್ಸಿ ನೋಟ್ ನಿಮಗೆ 57,000 ರೂ.ಗಳನ್ನು ತಂದುಕೊಡಬಹುದು. ಅದರ 1966 ರ ಆವೃತ್ತಿಯ ಬೆಲೆ 45,000 ರೂ. ಏಕೈಕ ವಿಷಯವೆಂದರೆ ಅದು ಹಣಕಾಸು ಸಚಿವಾಲಯದ ಮಾಜಿ ಪ್ರಧಾನ ಕಾರ್ಯದರ್ಶಿ ಹಿರುಭಾಯ್ ಎಂ. ಪಟೇಲ್ ಅವರ ಸಹಿಯನ್ನು ಹೊಂದಿರಬೇಕು.
ನೀವು ಈ ಯಾವುದೇ ಅಪರೂಪದ ನೋಟುಗಳನ್ನು ಹೊಂದಿದ್ದರೆ, ನೀವು ಕಾಯಿನ್ ಬಜಾರ್ ವೆಬ್ಸೈಟ್ ಗೆ ಭೇಟಿ ನೀಡಬಹುದು. ನಿಮ್ಮ ಹೆಸರು, ಇ-ಮೇಲ್ ಐಡಿ ಮತ್ತು ಸಂಪೂರ್ಣ ವಿಳಾಸದಂತಹ ವಿವರ ನೀಡುವ ಮೂಲಕ ಖಾತೆಯನ್ನು ರಚಿಸಬಹುದು. ನಂತರ ನೀವು ವೆಬ್ ಸೈಟ್ ನಲ್ಲಿ ನಾಣ್ಯಗಳು ಅಥವಾ ನೋಟುಗಳನ್ನು ಮಾರಾಟ ಮಾಡಬಹುದು. ನೀವು ನಾಣ್ಯ ಅಥವಾ ನೋಟು ಮತ್ತು ಅದಕ್ಕೆ ಪ್ರತಿಯಾಗಿ ನೀವು ನಿರೀಕ್ಷಿಸುವ ಬೆಲೆಯನ್ನು ತಿಳಿಸಬೇಕಾಗುತ್ತದೆ. ಆಸಕ್ತ ಖರೀದಿದಾರರು ನಿಮ್ಮನ್ನು ನೇರವಾಗಿ ಸಂಪರ್ಕಿಸುತ್ತಾರೆ.