ಮೋದಿ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸದಾನಂದ ಗೌಡರಿಗೆ ಕೇಂದ್ರ ಸಚಿವ ಸ್ಥಾನವನ್ನ ಕಸಿದುಕೊಳ್ಳಲಾಗಿತ್ತು. ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮ ನೀಡಿದ ವಿಚಾರವಾಗಿ ಇದೀಗ ಮೈಸೂರಿನಲ್ಲಿ ಡಿವಿ ಸದಾನಂದ ಗೌಡ ಪ್ರತಿಕ್ರಿಯೆ ನೀಡಿದ್ದಾರೆ.
ರಾಜೀನಾಮೆ ವಿಚಾರದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ತೆಗೆದುಕೊಳ್ಳುವ ತೀರ್ಮಾನವೇ ಅಂತಿಮವಾಗಿರಲಿದೆ. ಕೆಲ ರಾಜ್ಯಗಳಲ್ಲಿ ಮುಂದಿನ ಚುನಾವಣಾ ಸಂಘಟನಾ ದೃಷ್ಟಿಯಿಂದ ರಾಜೀನಾಮೆ ನೀಡುವಂತೆ ಹೇಳಿದ್ರು. ಪಕ್ಷದ ವರಿಷ್ಠರು ಸೂಚನೆ ನೀಡುತ್ತಿದ್ದಂತೆಯೇ ನಾನು ರಾಜೀನಾಮ ಪತ್ರವನ್ನ ನೀಡಿದ್ದೇನೆ. ರಾಜಕೀಯ ಅಂದರೆ ಅದೊಂದು ದೊಡ್ಡ ಸಮುದ್ರ. ಇಲ್ಲಿ ಟೀಕೆ ಟಿಪ್ಪಣೆಗಳು ಸರ್ವೇ ಸಾಮಾನ್ಯ. ಈ ಟೀಕೆಗಳಿಗೆ ನಮ್ಮ ಕಾರ್ಯದ ಮೂಲಕ ಉತ್ತರ ನೀಡಬೇಕು.
ಎಲ್ಲರೂ ರೋಡಿಗೆ ಬರಬೇಕು, ಅನೇಕ ರಹಸ್ಯ ಬಿಚ್ಚಿಟ್ಟ ಅರುಣಾಕುಮಾರಿ ಆಕ್ರೋಶ
ಬಿಜೆಪಿ ನನಗೆ ಎಲ್ಲವನ್ನೂ ಕೊಟ್ಟಿದೆ. ನನಗೆ ಪಕ್ಷ ಕೊಟ್ಟ ಅವಕಾಶಗಳು ಬಹುಶಃ ಈ ರಾಜ್ಯದಲ್ಲಿ ಇನ್ಯಾರಿಗೂ ಸಿಕ್ಕಿರಲಿಕ್ಕಿಲ್ಲ. ಅಧಿಕಾರ ಕೊಟ್ಟಾಗ ಎತ್ತರಕ್ಕೆ ಏರೋದು. ಕೊಡದೇ ಇದ್ದಾಗ ಕುಗ್ಗಿ ಹೋಗಬಾರದು. ಎಲ್ಲವನ್ನ ಸಮಾನ ಮನಸ್ಸಿನಿಂದ ಸ್ವೀಕಾರ ಮಾಡಬೇಕು ಎಂದು ಹೇಳಿದ್ರು.