ನಟ ದರ್ಶನ್ ಹೆಸರಲ್ಲಿ 25 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಇದಕ್ಕೆ ಮತ್ತೊಂದು ಟ್ವಿಸ್ಟ್ ದೊರಕಿದೆ. ಪ್ರಕರಣ ಸುಖಾಂತ್ಯ ಕಂಡಿತು ಅನ್ನೋದ್ರ ನಡುವೆಯೇ ಚಿತ್ರ ಸಾಹಿತಿ ವಿ. ನಾಗೇಂದ್ರ ಪ್ರಸಾದ್, ನಿರ್ಮಾಪಕ ಉಮಾಪತಿ ಜೊತೆ ಜಂಟಿ ಸುದ್ದಿಗೋಷ್ಠಿ ಕರೆದಿದ್ದಾರೆ.
ದರ್ಶನ್ಗೆ ದೋಖಾ ಕೇಸ್ನ ಪ್ರಮುಖ ರೂವಾರಿಯಾಗಿರುವ ಅರುಣಾ ಕುಮಾರಿ, ವಿ. ನಾಗೇಂದ್ರ ಪ್ರಸಾದ್ಗೂ ಮೋಸ ಮಾಡಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಅರುಣಾ ಕುಮಾರಿ ಮುಖವಾಡ ಕಳಚುವ ಸಲುವಾಗಿ ಈ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎನ್ನಲಾಗಿದೆ.
ಹೊರಗಿನವರು ಚಿತ್ರರಂಗದ ಸದಸ್ಯರಿಗೆ ಮೋಸ ಮಾಡುತ್ತಿದ್ದಾರೆ. ನಾನು ಹಾಗೂ ನನ್ನ ಪತ್ನಿ ಕೂಡ ಅರುಣಾ ಕುಮಾರಿ ಪಾಶಕ್ಕೆ ಸಿಲುಕಿದ್ದೇವೆ. ಇದನ್ನ ದಾಖಲೆ ಸಮೇತ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡುತ್ತೇನೆ ಎಂದು ವಿ. ನಾಗೇಂದ್ರ ಪ್ರಸಾದ್ ಹೇಳಿದ್ದಾರೆ ಎನ್ನಲಾಗಿದೆ.