ವಿಶ್ವ ಸಂಸ್ಥೆಗೆ ಭಾರತದಿಂದ ಸಹಾಯಕ ಮಹಾಕಾರ್ಯದರ್ಶಿಯೊಬ್ಬರ ವಿರುದ್ಧ ಮಾಡಿರುವ ಟ್ವೀಟ್‌ಗಳನ್ನು 24 ಗಂಟೆಗಳ ಒಳಗೆ ಹಿಂಪಡೆಯುವಂತೆ ಆರ್‌ಟಿಐ ಕಾರ್ಯಕರ್ತ ಸಾಕೇತ್ ಗೋಖಲೆಗೆ ದೆಹಲಿ ಹೈಕೋರ್ಟ್ ನಿರ್ದೇಶನ ಕೊಟ್ಟಿದೆ.
ಮಾಜಿ ಸಹಾಯಕ-ಮಹಾಕಾರ್ಯದರ್ಶಿ ಲಕ್ಷ್ಮಿ ಪುರಿ ವಿರುದ್ಧ ಸಾಕೇತ್ ಮಾಡಿರುವ ಟ್ವೀಟ್‌ಗಳು ಅವಹೇಳನಾಕಾರಿಯಾಗಿದೆ ಎಂಧು ನ್ಯಾಯಾಧೀಶ ಸಿ. ಹರಿ ಶಂಕರ್ ನೇತೃತ್ವದ ಏಕಸದಸ್ಯ ಪೀಠವು, ಒಂದು ವೇಳೆ ಈ ಟ್ವೀಟ್‌ಗಳನ್ನು ಡಿಲೀಟ್ ಮಾಡದೇ ಇದ್ದಲ್ಲಿ ಹಾಗೆ ಮಾಡಲು ಟ್ವಿಟರ್‌ಗೆ ಆದೇಶ ಕೊಡುವುದಾಗಿ ಹೈಕೋರ್ಟ್ ತಿಳಿಸಿದೆ.
ಲಕ್ಷ್ಮಿ ಪುರಿ ಅವರು ಕಪ್ಪು ಹಣವನ್ನು ಕೂಡಿಟ್ಟಿದ್ದಾರೆ ಎಂದು ಸಾಕೇತ್ ತಮ್ಮ ಟ್ವೀಟ್ ಸರಣಿಗಳಲ್ಲಿ ಆರೋಪಿಸಿದ್ದಾರೆ.
“ವ್ಯಕ್ತಿಯೊಬ್ಬರ ಘನತೆ ಹಾಳು ಮಾಡಲು ಅಂತರ್ಜಾಲದಲ್ಲಿ ಯಾರು ಬೇಕಾದರೂ ಏನನ್ನು ಬೇಕಾದರೂ ಬರೆಯುವಂತಾಗಿಬಿಟ್ಟಿದೆ’’ ಎಂದು ಹೇಳಿದ ಪೀಠ ಎರಡೂ ಕಡೆಗಳಿಂದ ವಾದಗಳನ್ನು ಆಲಿಸಿ ಆದೇಶವನ್ನು ಕಾಯ್ದಿರಿಸಿದೆ.