ಸಿಯೋಲ್: ದಕ್ಷಿಣ ಕೊರಿಯಾದ ಪ್ರಾಧ್ಯಾಪಕರೊಬ್ಬರು ವಿಶ್ವವಿದ್ಯಾಲಯದಲ್ಲಿ ಪರಿಸರ ಸ್ನೇಹಿ ಶೌಚಾಲಯ ನಿರ್ಮಿಸಿ ಎಲ್ಲರನ್ನೂ ಚಕಿತಗೊಳಿಸಿದ್ದಾರೆ.
ದಕ್ಷಿಣ ಕೊರಿಯಾದ ಉಲ್ಸಾನ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಆಂಡ್ ಟೆಕ್ನಾಲಜಿ ಕಾಲೇಜಿನ ಪ್ರಾಧ್ಯಾಪಕ ಚೋ ಜೇ-ವೆಯಾನ್ ಅವರು ಪರಿಸರ ಸ್ನೇಹಿ ಶೌಚಾಲಯ ವಿನ್ಯಾಸಗೊಳಿದ್ದಾರೆ. ಅಲ್ಲದೆ ಈ ಶೌಚಾಲಯ ಉಪಯೋಗಿಸಲು ವಿದ್ಯಾರ್ಥಿಗಳು ಡಿಜಿಟಲ್ ಮುಖಾಂತರ ಹಣ ಪಾವತಿಸಬೇಕು.
ಇನ್ನು ಪ್ರಾಧ್ಯಾಪಕರು ಮಾಡಿರುವ ಈ ಆವಿಷ್ಕಾರಕ್ಕೆ ‘ಬೀವಿ ಟಾಯ್ಲೆಟ್’ ಎಂದು ಹೆಸರಿಡಲಾಗಿದೆ. ನೆಲ ಅಂತಸ್ಥಿಗೆ ಮಾನವ ತ್ಯಾಜ್ಯ ಕಳುಹಿಸಲು ದೊಡ್ಡ ನಿರ್ವಾತ ಪಂಪ್ ಬಳಸಲಾಗುತ್ತದೆ. ಇದರಿಂದ ನೀರಿನ ಬಳಕೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಶೌಚಾಲಯದಿಂದ ಉತ್ಪತ್ತಿಯಾದ ಅನಿಲವು ಒಲೆ, ಬಿಸಿ ನೀರಿನ ಬಾಯ್ಲರ್ ಮುಂತಾದವುಗಳಿಗೆ ಇಂಧನವಾಗಿ ಬಳಕೆಯಾಗುತ್ತದೆ.
ದೇವರಿಗೆ ಕೈ ಮುಗಿದು ವಿಗ್ರಹವನ್ನೇ ಕದ್ದೊಯ್ದ ಭೂಪ…!
ಒಬ್ಬ ವ್ಯಕ್ತಿಯು ದಿನವೊಂದಕ್ಕೆ ಸರಾಸರಿ 500 ಗ್ರಾಂ ನಷ್ಟು ತ್ಯಾಜ್ಯ ಹೊರಹಾಕುತ್ತಾರೆ. ಇದರಿಂದ 13 ಗ್ಯಾಲನ್ ಮಿಥೇನ್ ಆಗಿ ಪರಿವರ್ತಿಸಹುದು. ಇದರಿಂದ 0.5 ಕಿಲೋ ವ್ಯಾಟ್ ವಿದ್ಯುತ್ ಉತ್ಪಾದಿಸಬಹುದು. ಇದರಿಂದ ಒಂದು ತಿಂಗಳವರೆಗೆ ಪ್ರತಿದಿನ ಒಂದು ಗಂಟೆ ಕಾಲ ಮೊಬೈಲ್ ಚಾರ್ಜ್ ಮಾಡಲು ಹಾಗೂ 1.2 ಕಿ.ಮೀ. ವರೆಗೆ ಎಲೆಕ್ಟ್ರಿಕ್ ವಾಹನ ಚಲಾಯಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.