ಕೈಗಳು ಹಾಗೂ ಮುಖದ ಕಸಿಯನ್ನು ಮೊಟ್ಟ ಮೊದಲ ಬಾರಿಗೆ ನೆರವೇರಿಸಿದ ಫ್ರೆಂಚ್ ಸರ್ಜನ್ ಜೀನ್ ಮೈಕೇಲ್ ಡುಬರ್ನಾರ್ಡ್ ತಮ್ಮ 80ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.
ನ್ಯೂಜಿಲೆಂಡ್ನ ವ್ಯಕ್ತಿಯೊಬ್ಬರಿಗೆ 1998ರಲ್ಲಿ ಕೈ ಕಸಿ ಮಾಡಿದ್ದ ಡುಬರ್ನಾರ್ಡ್ ವೈದ್ಯಲೋಕದಲ್ಲಿ ಸಂಚಲನ ಸೃಷ್ಟಿಸಿದ್ದರು. ಸಹ ಸರ್ಜನ್ಗಳೊಂದಿಗೆ ಸೇರಿಕೊಂಡ ಡುಬರ್ನಾರ್ಡ್, ರೋಗಿಯ ರಕ್ತನಾಳಗಳು, ನರಗಳು, ಟೆಂಡನ್ಗಳು, ಸ್ನಾಯುಗಳು ಹಾಗೂ ಚರ್ಮಗಳನ್ನು ಹೊಂದಿಸಿ, ಮುಂಗೈನ ಎಲುಬುಗಳನ್ನು ಹೆಣೆದು, 13 ಗಂಟೆಗಳ ಕಾಲ ಈ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದ್ದರು.
ಬಿಪಿಎಲ್ ಕಾರ್ಡ್ ಹೊಂದಿದ ಅನರ್ಹರಿಗೆ ಬಿಗ್ ಶಾಕ್: ‘ಆಧಾರ್’ ಆಧರಿಸಿ ಅನರ್ಹರ ಜಾಲಾಡ್ತಿದೆ ಆಹಾರ ಇಲಾಖೆ
ಈ ಸಾಧನೆಯ ಬೆನ್ನಿಗೆ, ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಡುಬರ್ನಾರ್ಡ್ ಅವರು ಎರಡು ಕೈಗಳನ್ನು ಒಮ್ಮೆಲೇ ಕಸಿ ಮಾಡಿದ್ದರು. 2005ರಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಈ ಖ್ಯಾತ ವೈದ್ಯ ಮುಖವೊಂದರ ಭಾಗಶಃ ಕಸಿ ಮಾಡಿ ಖ್ಯಾತಿ ಉತ್ತುಂಗಕ್ಕೇರಿದ್ದರು.
ಮೆದುಳು ನಿಷ್ಕ್ರಿಯಗೊಂಡಿದ್ದ ದಾನಿಯೊಬ್ಬರಿಂದ ಮೂಗು, ತುಟಿಗಳು, ಗಲ್ಲಗಳನ್ನು ತೆಗೆದು, ನಾಯಿಯಿಂದ ಕಚ್ಚಿಸಿಕೊಂಡು ಮುಖ ಹಾಳು ಮಾಡಿಕೊಂಡಿದ್ದ ಫ್ರೆಂಚ್ ಮಹಿಳೆ ಇಸಾಬೆಲ್ಲೆ ಡಿನಾರ್ಯ್ ಅವರಿಗೆ ಕಸಿ ಮಾಡಿದ್ದರು ಡುಬರ್ನಾರ್ಡ್.