ದೇಶದ ರಸ್ತೆಗಳ ಮೇಲಿರುವ ಗುಂಡಿಗಳು ಪ್ರತಿ ವರ್ಷ ಸಾವಿರಾರು ಮಂದಿಯ ಜೀವ ತೆಗೆದುಕೊಳ್ಳುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಬಗ್ಗೆ ಅದೆಷ್ಟೇ ವರದಿಗಳು ಬಂದರೂ ಆಡಳಿತಗಳು ದಿವ್ಯ ನಿರ್ಲಕ್ಷ್ಯ ವಹಿಸುವುದೂ ಹೊಸ ವಿಚಾರವೇನಲ್ಲ.
ಹೈದರಾಬಾದ್ನ ಹಿರಿಯ ಜೋಡಿಯೊಂದು ಕಳೆದ 11 ವರ್ಷಗಳಿಂದ ತಮ್ಮ ನಗರದ ರಸ್ತೆಗಳಲ್ಲಿ ಬಿದ್ದಿರುವ ಒಂದೊಂದೇ ಹಳ್ಳವನ್ನು ತಮ್ಮದೇ ಶ್ರಮ ಹಾಗೂ ದುಡ್ಡಿನಿಂದ ಸರಿಪಡಿಸುತ್ತಾ ಬಂದಿದ್ದಾರೆ.
73 ವರ್ಷದ ಗಂಗಾಧರ್ ತಿಲಕ್ ಕಟ್ನಾಂ ಹಾಗೂ ಅವರ ಮಡದಿ ವೆಂಕಟೇಶ್ವರಿ ಕಟ್ನಾಂ (64) ತಮ್ಮದೇ ಕಾರಿನಲ್ಲಿ ನಗರದ ವಿವಿಧ ರಸ್ತೆಗಳು ಹಾಗೂ ಜಂಕ್ಷನ್ಗಳಿಗೆ ಭೇಟಿ ಕೊಡುತ್ತಾ, ಹಳ್ಳಗಳನ್ನು ಸರಿಪಡಿಸುತ್ತಿದ್ದಾರೆ.
ಪ್ರಿಯಕರನನ್ನು ಮರಳಿ ಪಡೆಯಲು ಹೋಗಿ ಇಂಗು ತಿಂದ ಮಂಗನಂತಾದ್ಲು ಯುವತಿ…!
ರಸ್ತೆ ಡಾಕ್ಟರ್ ಎಂದೇ ಖ್ಯಾತರಾದ ಗಂಗಾಧರ್ ತಮ್ಮ ಕಾರನ್ನು ’ಹಳ್ಳ-ಕೊಳ್ಳಗಳ ಆಂಬುಲೆನ್ಸ್’ ಎಂದೇ ಕರೆಯುತ್ತಾರೆ.
“ನನ್ನ ಪಿಂಚಣಿ ದುಡ್ಡನ್ನು ಬಳಸಿಕೊಂಡು ರಸ್ತೆಗಳ ಗುಂಡಿಗಳನ್ನು ಸರಿಪಡಿಸಲು ನಿರ್ಧರಿಸಿದೆ. ಇದುವರೆಗೂ 40 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿ ಸುಮಾರು 2000 ಗುಂಡಿಗಳನ್ನು ತುಂಬಿದ್ದೇನೆ” ಎನ್ನುತ್ತಾರೆ ಗಂಗಾಧರ್.
ಭಾರತೀಯ ರೈಲ್ವೇಯಲ್ಲಿ 35 ವರ್ಷ ಕೆಲಸ ಮಾಡಿದ ಬಳಿಕ ಹೈದರಾಬಾದ್ಗೆ ಬಂದ ಗಂಗಾಧರ್ ತಮ್ಮ ಎಂಜಿನಿಯರಿಂಗ್ ಪದವಿ ಮೇಲೆ ಸಾಫ್ಟ್ವೇರ್ ಕಂಪನಿಯೊಂದಕ್ಕೆ ಸೇರಿದ್ದಾರೆ. ತಮ್ಮೂರಿನ ರಸ್ತೆಗಳ ಮೇಲಿರುವ ಹಳ್ಳಗಳನ್ನು ಕಂಡು ಬೇಸರಗೊಂಡ ಗಂಗಾಧರ್ ’ಶ್ರಮದಾನ’ ಹೆಸರಿನ ಸಂಸ್ಥೆಯೊಂದನ್ನು ಆರಂಭಿಸಿದ್ದು, ಜನರು ಸ್ವಯಂ ಪ್ರೇರಣೆಯಿಂದ ರಸ್ತೆ ಗುಂಡಿಗಳ ರಿಪೇರಿಗೆ ತಗುಲುವ ವೆಚ್ಚ ಭರಿಸಲು ತಮ್ಮದೇ ಕೊಡುಗೆಗಳನ್ನು ನೀಡಬಹುದಾಗಿದೆ.