ನವದೆಹಲಿ: ಯಂತ್ರೋಪಕರಣಗಳು ಮತ್ತು ಬಿಡಿಭಾಗಗಳು, ಕೆಲ ಔಷಧಗಳು ಸೇರಿದಂತೆ ಹಲವು ಉತ್ಪನ್ನಗಳಿಗೆ ಆಮದು ಸುಂಕ ವಿನಾಯಿತಿ ರದ್ದು ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಸಾಗರೋತ್ಪನ್ನಗಳು, ನಿರ್ದಿಷ್ಟ ವಿಧದ ತರಕಾರಿ ಮತ್ತು ಹಣ್ಣುಗಳು ಸೇರಿದಂತೆ 97 ಉತ್ಪನ್ನಗಳಿಗೆ ಆಮದು ಸುಂಕ ವಿನಾಯಿತಿ ರದ್ದು ಮಾಡಲಾಗುವುದು. ಸ್ವದೇಶಿ ಉತ್ಪನ್ನಗಳ ಉತ್ಪಾದನೆಗೆ ಉತ್ತೇಜನ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಇಂತಹ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗಿದೆ.
ಎಲೆಕ್ಟ್ರಾನಿಕ್ಸ್, ಟೆಲಿಕಾಂ, ಜವಳಿ, ವಿದ್ಯುತ್, ಅನಿಲ, ಔಷಧ, ತೈಲ, ಯಂತ್ರೋಪಕರಣ ಬಿಡಿಭಾಗ ಮೊದಲಾದ ಉತ್ಪನ್ನಗಳ ಆಮದಿಗೆ ವಿಧಿಸಿದ್ದ ಸುಂಕ ವಿನಾಯಿತಿ ರದ್ದು ಮಾಡಲಾಗುವುದು. ಇಂತಹ ಉತ್ಪನ್ನಗಳ ಸ್ಥಳೀಯ ಉತ್ಪಾದನೆಗೆ ಉತ್ತೇಜನ ನೀಡಲಾಗುವುದು ಎನ್ನಲಾಗಿದೆ.