alex Certify SMS ಮೂಲಕ ಆಧಾರ್‌ ಅಪ್‌ ಡೇಟ್ ಮಾಡುವುದು ಹೇಗೆ…? ಇಲ್ಲಿದೆ ಉಪಯುಕ್ತ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SMS ಮೂಲಕ ಆಧಾರ್‌ ಅಪ್‌ ಡೇಟ್ ಮಾಡುವುದು ಹೇಗೆ…? ಇಲ್ಲಿದೆ ಉಪಯುಕ್ತ ಮಾಹಿತಿ

ಅಂತರ್ಜಾಲದ ಸಂಪರ್ಕ ಇಲ್ಲದ ಮಂದಿಗೆ ಆಧಾರ್‌ ಸೇವೆಗಳನ್ನು ಪಡೆಯಲು ಎಸ್‌ಎಂಎಸ್ ಮುಖಾಂತರ ಆಧಾರ್‌ ಸೇವೆಗಳನ್ನು ಒದಗಿಸಲಾಗಿದೆ.

ಎಸ್‌ಎಂಎಸ್ ಮೂಲಕ ಕೆಳಕಂಡ ಆಧಾರ್‌ ಸಂಬಂಧಿ ಸೇವೆಗಳನ್ನು ಪಡೆಯಬಹುದಾಗಿದೆ:

1. ವರ್ಚುವಲ್ ಐಡಿಗಾಗಿ: GVID (SPACE) ನಿಮ್ಮ ಆಧಾರ್‌ ಸಂಖ್ಯೆಯ ಕೊನೆಯ 4 ಅಂಕಿಗಳನ್ನು ಟೈಪ್ ಮಾಡಿ 1947ಕ್ಕೆ ಎಸ್‌ಎಂಎಸ್ ಮಾಡಿ.

2. ನಿಮ್ಮ ವರ್ಚುವಲ್ ಐಡಿ ಮರಳಿ ಪಡೆಯಲು: RVID (SPACE) ನಿಮ್ಮ ಆಧಾರ್‌ ಸಂಖ್ಯೆಯ ಕೊನೆಯ 4 ಅಂಕಿಗಳನ್ನು ಟೈಪ್ ಮಾಡಿ 1947ಕ್ಕೆ ಎಸ್‌ಎಂಎಸ್ ಮಾಡಿ.

ಎಸ್‌ಎಂಎಸ್ ಮೂಲಕ ಓಟಿಪಿ ಪಡೆಯಲು

1. ಆಧಾರ್‌ ಸಂಖ್ಯೆಯೊಂದಿಗೆ ಓಟಿಪಿ ಪಡೆಯಲು: GETOTP (SPACE) ನಿಮ್ಮ ಆಧಾರ್‌ ಸಂಖ್ಯೆಯ ಕೊನೆಯ 4 ಅಂಕಿಗಳನ್ನು ಟೈಪ್ ಮಾಡಿ 1947ಕ್ಕೆ ಎಸ್‌ಎಂಎಸ್ ಮಾಡಿ.

2. ವರ್ಚುವಲ್ ಐಡಿಯೊಂದಿಗೆ ಓಟಿಪಿ ಪಡೆಯಲು: GETOTP (SPACE) ನಿಮ್ಮ ವರ್ಚುವಲ್ ಐಡಿ ಕೊನೆಯ ಆರು ಅಂಕಿಗಳನ್ನು ಟೈಪ್ ಮಾಡಿ.

ಎಸ್‌ಎಂಎಸ್ ಮೂಲಕ ಆಧಾರ್‌ ಅನ್‌ಲಾಕ್ ಮಾಡಲು:

1. ಮೊದಲ ಎಸ್‌ಎಂಎಸ್‌ನಲ್ಲಿ: GETOTP (SPACE) ನಿಮ್ಮ ಆಧಾರ್‌ ಸಂಖ್ಯೆಯ ಕೊನೆಯ 4 ಅಂಕಿಗಳನ್ನು ಟೈಪ್ ಮಾಡಿ 1947ಕ್ಕೆ ಎಸ್‌ಎಂಎಸ್ ಮಾಡಿ.

2. ಓಟಿಪಿ ಬರುತ್ತಲೇ ಕೂಡಲೇ ಕಳುಹಿಸಬೇಕಾದ ಎರಡನೇ ಎಸ್‌ಎಂಎಸ್‌ನಲ್ಲಿ: LOCKUID (SPACE) ಆಧಾರ್‌ನ ಕೊನೆಯ ನಾಲ್ಕು ಅಂಕಿಗಳು (SPACE) ಆರು ಅಂಕಿಯ ಓಟಿಪಿ.

ಅನ್ಲಾಕಿಂಗ್:

1. GETOTP (SPACE) ನಿಮ್ಮ ವಿಐಡಿಯ ಕೊನೆಯ ಆರು ಅಂಕಿಗಳನ್ನು ಟೈಪ್ ಮಾಡಿ ಎಸ್‌ಎಂಎಸ್ ಕಳುಹಿಸಿ.

2. ನಂತರ ಎರಡನೇ ಎಸ್‌ಎಂಎಸ್‌ನಲ್ಲಿ: UNLOCKUID (SPACE) ನಿಮ್ಮ ಯುಐಡಿಯ ಕೊನೆಯ ಆರು ಅಂಕಿಗಳು (SPACE) ಆರು ಅಂಕಿಯ ಓಟಿಪಿ ಟೈಪ್ ಮಾಡಿ ಕಳುಹಿಸಿ.

ಇದೇ ರೀತಿಯಲ್ಲಿ ಬಯೋಮೆಟ್ರಿಕ್ಸ್ ವಿವರಗಳನ್ನು ಎಸ್‌ಎಂಎಸ್ ಮೂಲಕ ಬ್ಲಾಕ್ ಅಥವಾ ಅನ್‌ಬ್ಲಾಕ್ ಮಾಡಬಹುದಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...