ನವದೆಹಲಿ: ಆಟೋಮೊಬೈಲ್ ಕ್ಷೇತ್ರದ ಪ್ರಮುಖ ಕಂಪನಿಯಾಗಿರುವ ಮಾರುತಿ ಸುಜುಕಿ ವಾಹನಗಳ ಬೆಲೆ ಹೆಚ್ಚಿಸಿದೆ. ಸ್ವಿಫ್ಟ್, ಆಲ್ಟೊ, ವ್ಯಾಗನ್ ಆರ್ ಮೊದಲಾದ ಕಾರ್ ಗಳ ಬೆಲೆಯಲ್ಲಿ ಹೆಚ್ಚಳ ಮಾಡಲಾಗಿದೆ. 15 ಸಾವಿರ ರೂಪಾಯಿಗಳವರೆಗೆ ದರ ಹೆಚ್ಚಳ ಮಾಡಲಾಗಿದೆ.
ಸೆಲೆರಿಯೊ, ವ್ಯಾಗನ್ ಆರ್, ಇಕೋ, ಎರಿಟಿಗಾ ಮೊದಲಾದ ಕಾರುಗಳ ಬೆಲೆ ಹೆಚ್ಚಳವಾಗಿದೆ. ಇನ್ಪುಟ್ ವೆಚ್ಚಗಳ ಹೆಚ್ಚಳದಿಂದಾಗಿ ಕಾರುಗಳ ಬೆಲೆ ಹೆಚ್ಚಳ ಮಾಡಲಾಗಿದೆ. ಎಕ್ಸ್ ಶೋರೂಮ್ ದರಗಳು ಜುಲೈ 12 ರಿಂದ ಜಾರಿಗೆ ಬರುವಂತೆ ಕೆಲವು ಕಾರುಗಳ ಬೆಲೆಯನ್ನು ಏರಿಕೆ ಮಾಡಲಾಗಿದೆ.
ಸ್ವಿಫ್ಟ್ ಮತ್ತು ಎಲ್ಲಾ ಸಿಎನ್‌ಜಿ ಮಾದರಿ ಕಾರ್ ಗಳ ಬೆಲೆ ಹೆಚ್ಚಳ ಮಾಡಲಾಗಿದ್ದು, ಬೇರೆ ಮಾದರಿಯ ಕಾರುಗಳ ಬೆಲೆಯನ್ನು ಕೂಡ ಶೀಘ್ರದಲ್ಲೇ ಏರಿಕೆ ಮಾಡಲಾಗುವುದು. 2021ರ ಜನವರಿ ಮತ್ತು ಏಪ್ರಿಲ್ ನಲ್ಲಿ ಮಾರುತಿ ಕಾರುಗಳ ಬೆಲೆ ಹೆಚ್ಚಳ ಮಾಡಲಾಗಿದ್ದು, ಇನ್ಪುಟ್ ವೆಚ್ಚ ಹೆಚ್ಚಳದ ಕಾರಣಕ್ಕೆ ಮತ್ತೊಮ್ಮೆ ಹೆಚ್ಚಳ ಮಾಡಲಾಗಿದೆ ಎಂದು ಹೇಳಲಾಗಿದೆ.