ಲಾಸ್ ವೆಗಾಸ್: ಕೊರೋನಾ ಸಾಂಕ್ರಮಿಕದಿಂದಾಗಿ ಜನಜೀವನ ಬಹಳ ಕಷ್ಟಕರವಾಗಿದೆ. ಎಲ್ಲೂ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಲಾಕ್ ಡೌನ್ ನಿಂದಾಗಿ ಹಲವು ಉದ್ಯಮಗಳು ನಷ್ಟ ಅನುಭವಿಸಿದೆ. ಅದರಲ್ಲಿ ಹೋಟೆಲ್ ಉದ್ಯಮ ಕೂಡ ಒಂದು. ಲಾಕ್ ಡೌನ್ ನಷ್ಟದಿಂದಾಗಿ ಹಲವೆಡೆ ಸಿಬ್ಬಂದಿ ಕಡಿತ ಮಾಡಲಾಗಿದೆ. ಆದರೆ ಇಲ್ಲೊಂದು ರೆಸ್ಟೋರೆಂಟ್ ಮಾತ್ರ ತನ್ನ ಉದ್ಯೋಗಿಗಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿದೆ.
ಹೌದು, ಅಮೆರಿಕಾದ ಲೂಯಿಸ್ವಿಲ್ಲೆಯಲ್ಲಿನ ಉಪಹಾರ ಗೃಹವೊಂದು ತನ್ನ ಉದ್ಯೋಗಿಗಳನ್ನು ಲಾಸ್ ವೆಗಾಸ್ ಗೆ ಕರೆದೊಯ್ದಿದೆ. ಪರೀಕ್ಷಾ ಸಮಯದಲ್ಲಿ ಉದ್ಯೋಗಿಗಳ ಶ್ರಮದ ಪ್ರತಿಫಲವಾಗಿ ರೆಸ್ಟೋರೆಂಟ್ ಈ ನಿರ್ಧಾರ ಕೈಗೊಂಡಿತು.
ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ನಿಧನ
ಅಲ್ಲದೆ ಫೇಸ್ ಬುಕ್ ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ ರಾಮೆನ್ ಹೌಸ್ ಲೂಯಿಸ್ವಿಲ್ಲೆ- ‘’ಕ್ಷಮಿಸಿ, ಒಂದು ವಾರದವರೆಗೆ ನಮ್ಮ ಹೋಟೆಲನ್ನು ಮುಚ್ಚಲಾಗಿದೆ. ಕಷ್ಟದ ಸಮಯದಲ್ಲಿ ನಮ್ಮ ನೌಕರರು ಶ್ರಮ ಹಾಗೂ ಶ್ರದ್ಧೆಯಿಂದ ಕೆಲಸ ಮಾಡಿದ್ದಾರೆ. ಅವರು ವಿರಾಮಕ್ಕೆ ಅರ್ಹರಾಗಿರುವುದರಿಂದ ಅವರನ್ನು ಲಾಸ್ ವೆಗಾಸ್ ಗೆ ಕರೆದೊಯ್ಯಲು ನಿರ್ಧರಿಸಿದ್ದೇವೆ’’ ಎಂದು ಬರೆದು ಫೋಟೋ ಹಾಕಿ ಪೋಸ್ಟ್ ಮಾಡಲಾಗಿದೆ.
ಉದ್ಯೋಗಿಗಳಿಗೆ ಬಿಡುವು ಕೊಟ್ಟು ಪ್ರವಾಸಕ್ಕೆ ಕರೆದುಕೊಂಡು ಹೋಗಿರುವುದು ಒಳ್ಳೆಯ ಬೆಳವಣಿಗೆ ಎಂದು ಜನರು ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ.
https://www.facebook.com/RamenHouseLouisville/posts/4243620312342741