ಚರ್ಚ್ ಒಂದರ ಬೆಲ್ ಟವರ್ ಏರಿದ ವ್ಯಕ್ತಿಯೊಬ್ಬ, ಕ್ರಾಸ್ಗೆ ಬೆಂಕಿ ಹಚ್ಚಿ, ಮೇಲ್ಛಾವಣಿಗಳ ಮೇಲೆ ಜಂಪಿಂಗ್ ಮಾಡಿ, ಕಟ್ಟಡಗಳಿಂದ ರ್ಯಾಪಲಿಂಗ್ ಮಾಡಿದ್ದ ಲಾಸ್ ಏಂಜಿಲೀಸ್ನ ಪೊಲೀಸರು ಬಂಧಿಸಿದ್ದಾರೆ.
ಲಾಸ್ ಏಂಜಿಲೀಸ್ನ ಬಾಯ್ಲ್ ಹೈಟ್ಸ್ನಲ್ಲಿರುವ ಸೇಂಟ್ ಮೇರೀ’ಸ್ ಕ್ಯಾಥೋಲಿಕ್ ಚರ್ಚ್ನಲ್ಲಿ ಈ ಘಟನೆ ಜರುಗಿದೆ.
ಸ್ಟಾನ್ ಸ್ವಾಮಿ ಬಗ್ಗೆ ಕೇಂದ್ರ ಸರ್ಕಾರಕ್ಕೆ ಭಯವಿತ್ತು ಎಂದ ಶಿವಸೇನಾ ಸಂಸದ
ಇಡೀ ಘಟನೆ ಸಿಸಿ ಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದು, ಸುದ್ದಿ ವಾಹಿನಿಯೊಂದರಲ್ಲಿ ನೇರವಾಗಿ ಬಿತ್ತರವೂ ಆಗಿದೆ. ಫಾಕ್ಸ್ 11ನ ಲಾಸ್ ಏಂಜಿಲೀಸ್ ಹೆಲಿಕಾಪ್ಟರ್ ಸಿಬ್ಬಂದಿ ಈ ದೃಶ್ಯಾವಳಿಯನ್ನು ರೆಕಾರ್ಡ್ ಮಾಡಿದ್ದಾರೆ. ಈ ದುಷ್ಕರ್ಮಿಯು ಇದೇ ವೇಳೆ ಶರ್ಟ್ ಧರಿಸಿರಲಿಲ್ಲ.
ಅದೃಷ್ಟವಶಾತ್ ಈತ ಹಚ್ಚಿದ ಬೆಂಕಿಯ ಕಿಡಿ ವ್ಯಾಪಿಸದೇ ಇದ್ದ ಕಾರಣ 94 ವರ್ಷದ ಚರ್ಚ್ಗೆ ಯಾವುದೇ ದೊಡ್ಡ ಹಾನಿಯಾಗಿಲ್ಲ ಹಾಗೂ ಯಾರಿಗೂ ಗಾಯಗಳಾಗಿಲ್ಲ.