ಮಹಿಳೆಯರ ಸೌಂದರ್ಯವನ್ನು ತಲೆಗೂದಲು ಇಮ್ಮಡಿಗೊಳಿಸುತ್ತದೆ. ಉದ್ದನೆಯ ಕೂದಲು ಪಡೆಯಬೇಕೆನ್ನುವುದು ಅನೇಕರ ಬಯಕೆ. ಚೀನಾದ ಮಹಿಳೆಯರು ಈ ವಿಚಾರದಲ್ಲಿ ಅದೃಷ್ಟವಂತರು.
BIG NEWS: ರಾಜಕೀಯ ಒತ್ತಡ; ಅಧಿಕಾರ ವಹಿಸಿಕೊಳ್ಳದ ಮಹಿಳಾ ಪೊಲೀಸ್ ವರಿಷ್ಠಾಧಿಕಾರಿ; ರಾಜ್ಯಪಾಲರ ಅಂಗಳ ತಲುಪಿದ ಮಂಡ್ಯ SP ನೇಮಕ ವಿವಾದ
ಚೀನಾದ ಗ್ವಾಂಗ್ಸೈ ಪ್ರಾಂತ್ಯದ Huangluo ಗ್ರಾಮದ ಮಹಿಳೆಯರ ಕೂದಲು ವಿಶ್ವಪ್ರಸಿದ್ಧಿ ಪಡೆದಿದೆ. ಇಲ್ಲಿ ವಾಸವಾಗಿರುವ ಮಹಿಳೆಯರ ಕೂದಲು 3-7 ಅಡಿ ಉದ್ದ ಬೆಳೆಯುತ್ತದೆ.
ಈ ಗ್ರಾಮದಲ್ಲಿ ವಾಸವಾಗಿರುವ ಬುಡಕಟ್ಟು ಜನಾಂಗಕ್ಕೆ 200 ವರ್ಷಗಳ ಇತಿಹಾಸವಿದೆ. ಇಲ್ಲಿ 60 ಮಹಿಳೆಯರಿದ್ದಾರೆ. ಈ ಜನಾಂಗದ ಜನರು ಉದ್ದನೆಯ, ಕಪ್ಪನೆಯ ಹಾಗೂ ಹೊಳಪುಳ್ಳ ಕೂದಲಿಗೆ ಹೆಸರುವಾಸಿಯಾಗಿದ್ದಾರೆ. ಹುಡುಗಿಗೆ 18 ವರ್ಷವಾಗ್ತಾ ಇದ್ದಂತೆ ಆಕೆ ಕೂದಲನ್ನು ಕತ್ತರಿಸಲಾಗುತ್ತದೆಯಂತೆ. ಈಕೆ ಮದುವೆಗೆ ಸಿದ್ಧಳಾಗಿದ್ದಾಳೆನ್ನುವುದು ಇದರ ಅರ್ಥವಂತೆ. ಆ ನಂತ್ರ ಕೂದಲು ಕತ್ತರಿಸುವುದಿಲ್ಲ ಎನ್ನುತ್ತಾರೆ ಇಲ್ಲಿನವರು.