ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಇಂದು ಪರಿಷ್ಕರಣೆ ಮಾಡಲಾಗಿದ್ದು, ಡೀಸೆಲ್ ದರ ಕಡಿಮೆಯಾಗಿದೆ. ಆದರೆ, ಪೆಟ್ರೋಲ್ ದರ ಏರುಗತಿಯಲ್ಲಿyE ಮುಂದುವರೆದಿದೆ.
ಐತಿಹಾಸಿಕ ಗರಿಷ್ಠ ಮಟ್ಟ ತಲುಪಿದ ನಂತರ ಜುಲೈ 12 ರಂದು ಡೀಸೆಲ್ ದರ 15 ರಿಂದ 17 ಪೈಸೆಯಷ್ಟು ಕಡಿಮೆಯಾಗಿದೆ. ಪೆಟ್ರೋಲ್ ದರ 25 ರಿಂದ 34 ಪೈಸೆಯಷ್ಟು ಹೆಚ್ಚಳವಾಗಿದೆ. ಪ್ರತಿದಿನ ಪೈಸೆಗಳ ಲೆಕ್ಕದಲ್ಲಿ ಏರಿಕೆಯಾದ ಪೆಟ್ರೋಲ್ ಮತ್ತು ಡೀಸೆಲ್ ದರ ದೇಶಾದ್ಯಂತ ಗರಿಷ್ಠ ಮಟ್ಟಕ್ಕೆ ತಲುಪಿದೆ.
ಕಳೆದ ಎರಡು ತಿಂಗಳಿಗೂ ಹೆಚ್ಚುಕಾಲ ಡೀಸೆಲ್ ದರ ಏರುಗತಿಯಲ್ಲಿ ಸಾಗಿ ಇದೇ ಮೊದಲ ಬಾರಿಗೆ ಇಳಿಕೆ ಕಂಡಿದೆ. ದರ ಪರಿಷ್ಕರಣೆ ನಂತರ ಮುಂಬೈನಲ್ಲಿ ಪ್ರತಿ ಲೀಟರ್ ಡೀಸೆಲ್ ಗೆ 17 ಪೈಸೆ ಇಳಿಕೆಯಾಗಿದ್ದು, 97.33 ರೂಪಾಯಿ ಇದೆ. ದೇಶದ ಬಹುತೇಕ ಭಾಗದಲ್ಲಿ 100 ರೂಪಾಯಿ ಗಡಿ ದಾಟಿರುವ ಪೆಟ್ರೋಲ್ ಬೆಲೆ ಮುಂಬೈನಲ್ಲಿ 27 ಪೈಸೆಯಷ್ಟು ಹೆಚ್ಚಾಗಿದ್ದು, 107.24 ರೂ.ಗೆ ತಲುಪಿದೆ.