ಮಹಿಳೆಯರಿಗೆಂದೇ ಹೊಸ ಸ್ಕೀಂ ಒಂದನ್ನು ಜೀವ ವಿಮಾ ಕಾರ್ಪೋರೇಷನ್ (ಎಲ್ಐಸಿ) ಪರಿಚಯಿಸಿದೆ. 8 ರಿಂದ 55 ವರ್ಷ ವಯಸ್ಸಿನ ಮಹಿಳೆಯರು ಈ ಸ್ಕೀಂ ಸೇರಬಹುದಾಗಿದೆ.
ʼಆಧಾರ್ ಶಿಲಾʼ ಹೆಸರಿನ ಈ ಯೋಜನೆಯಡಿ ಹೂಡಿಕೆದಾರರು ಪ್ರತಿನಿತ್ಯ 29 ರೂಪಾಯಿಗಳನ್ನು ಹೂಡುತ್ತಾ ಹೋದಲ್ಲಿ, ಮೆಚ್ಯೂರಿಟಿ ವೇಳೆಗೆ ಆ ದುಡ್ಡು ನಾಲ್ಕು ಲಕ್ಷ ರೂಪಾಯಿಗಳಾಗಿ ಬೆಳೆದಿರುತ್ತದೆ. ಕನಿಷ್ಠ 10 ವರ್ಷಗಳಿಂದ ಗರಿಷ್ಠ 20 ವರ್ಷಗಳವರೆಗೂ ಮಹಿಳಾ ಹೂಡಿಕೆದಾರರು ಈ ಸ್ಕೀಂನಲ್ಲಿ ಹೂಡಿಕೆ ಮಾಡಬಹುದಾಗಿದೆ.
ಒಂದು ವೇಳೆ ಹೂಡಿಕೆದಾರರು ಮೆಚ್ಯೂರಿಟಿಗೂ ಮುನ್ನ ನಿಧನರಾದಲ್ಲಿ, ಅವರ ಕುಟುಂಬಕ್ಕೆ, ಕನಿಷ್ಠ 75,000 ರೂಪಾಯಿಗಳಿಂದ ಗರಿಷ್ಠ ಮೂರು ಲಕ್ಷ ರೂಪಾಯಿಗಳವರೆಗೂ ಎಲ್ಐಸಿ ಆರ್ಥಿಕ ನೆರವನ್ನೂ ಕೊಡಲಿದೆ.
ಪ್ರತಿ ವರ್ಷವೂ 10,959 ರೂಪಾಯಿಗಳನ್ನು 4.5% ತೆರಿಗೆಯೊಂದಿಗೆ ನಿರಂತರ 20 ವರ್ಷಗಳ ಮಟ್ಟಿಗೆ ಪಾವತಿ ಮಾಡಿದಲ್ಲಿ, ನೀವು ಎಲ್ಐಸಿಗೆ 2,14,696 ರೂಪಾಯಿಗಳನ್ನು ಪಾವತಿ ಮಾಡಲಿದ್ದೀರಿ. ನಿಮ್ಮ ಹೂಡಿಕೆಯ ರಿಟರ್ನ್ ಆಗಿ ಎಲ್ಐಸಿ ನಿಮಗೆ ನಾಲ್ಕು ಲಕ್ಷ ರೂಪಾಯಿಗಳನ್ನು ಕೊಡಲಿದೆ. ಹೂಡಿಕೆದಾರರು ತಮ್ಮ ಪ್ರೀಮಿಯಂಗಳನ್ನು ಮಾಸಿಕ, ತ್ರೈಮಾಸಿಕ ಹಾಗೂ ಅರ್ಧ ವಾರ್ಷಿಕಗಳ ಲೆಕ್ಕದಲ್ಲಿ ಪಾವತಿ ಮಾಡಬಹುದಾಗಿದೆ.