ಕೊರೋನಾ ತಡೆಗೆ ಹೇರಲಾಗಿದ್ದ ನಿರ್ಬಂಧ ಸಡಿಲಿಕೆ ಮಾಡಲಾಗಿದ್ದು, ಹಾಸನ ಜಿಲ್ಲೆಯಲ್ಲಿ ಇಂದಿನಿಂದ ಕಂಪ್ಲೀಟ್ ಅನ್ ಲಾಕ್ ಜಾರಿಗೆ ಬರಲಿದೆ.
ಎರಡು ತಿಂಗಳ ನಂತರ ಇಂದಿನಿಂದ ಜಿಲ್ಲೆಯಲ್ಲಿ ವಹಿವಾಟು ಸಂಪೂರ್ಣ ಆರಂಭವಾಗಲಿದ್ದು, ರಾಜ್ಯ ಸರ್ಕಾರದ ನಿಯಮಗಳ ಅನುಸಾರ ವಹಿವಾಟು ನಡೆಸಲು ಅವಕಾಶ ಕಲ್ಪಿಸಲಾಗಿದೆ. ವಾರದ 7 ದಿನಗಳು ಬೆಳಗ್ಗೆ 6 ರಿಂದ ಎಲ್ಲಾ ಅಂಗಡಿ, ಮುಂಗಟ್ಟುಗಳು ವ್ಯಾಪಾರ ವಹಿವಾಟು ನಡೆಸಬಹುದು. ರಾಜ್ಯ ಸರ್ಕಾರದಿಂದ ಮಾರ್ಗಸೂಚಿಗಳನ್ನು ಪಾಲಿಸುವಂತೆ ಹಾಸನ ಜಿಲ್ಲಾಡಳಿತದಿಂದ ಮಾಹಿತಿ ನೀಡಲಾಗಿದೆ.