alex Certify GOOD NEWS: ಇಳಿಕೆಯತ್ತ ಸಾಗಿದ ಕೊರೊನಾ ಸೋಂಕಿತರ ಸಂಖ್ಯೆ; ಸಾವಿನ ಸಂಖ್ಯೆಯಲ್ಲೂ ಇಳಿಮುಖ: ಇಲ್ಲಿದೆ ಕಂಪ್ಲೀಟ್‌ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

GOOD NEWS: ಇಳಿಕೆಯತ್ತ ಸಾಗಿದ ಕೊರೊನಾ ಸೋಂಕಿತರ ಸಂಖ್ಯೆ; ಸಾವಿನ ಸಂಖ್ಯೆಯಲ್ಲೂ ಇಳಿಮುಖ: ಇಲ್ಲಿದೆ ಕಂಪ್ಲೀಟ್‌ ವಿವರ

ನವದೆಹಲಿ: ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 41,506 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ.

ಕಳೆದ 24 ಗಂಟೆಯಲ್ಲಿ 895 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಇದುವರೆಗೂ ದೇಶದಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 4,08,040ಕ್ಕೆ ಏರಿಕೆಯಾಗಿದೆ.

ತರಬೇತಿ ವೇಳೆ ಲೈಂಗಿಕ ದೌರ್ಜನ್ಯ: ಕೋಚ್ ವಿರುದ್ಧ ದೂರುಗಳ ಸುರಿಮಳೆ

ಇನ್ನು ದೇಶದಲ್ಲಿ 4,54,118 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, 24 ಗಂಟೆಯಲ್ಲಿ 41,526 ಜನರು ಗುಣಮುಖರಾಗಿದ್ದಾರೆ. ದೇಶದಲ್ಲಿ ಈವರೆಗೆ 2,99,75,064 ಜನರು ಕೋವಿಡ್ ನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಕಳೆದ 24ಗಂಟೆಯಲ್ಲಿ 37,23,367 ಜನರಿಗೆ ವ್ಯಾಕ್ಸಿನ್ ಹಾಕಲಾಗಿದ್ದು, ದೇಶದಲ್ಲಿ ಈವರೆಗೆ 37,60,32,586 ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಇನ್ನು ತ್ರಿಪುರಾದ ಕೊರೊನಾ ಟೆಸ್ಟ್‌ ಸ್ಯಾಂಪಲ್‌ ನಲ್ಲಿ ಶೇ.90 ರಷ್ಟು ಡೆಲ್ಟಾ ಪ್ಲಸ್‌ ರೂಪಾಂತರಿ ಕಂಡು ಬಂದಿರುವುದು ಮತ್ತೊಂದು ಆತಂಕಕ್ಕೆ ಕಾರಣವಾಗಿದೆ. ಎಂಟು ಜಿಲ್ಲೆಗಳ 151 ಸ್ಯಾಂಪಲ್‌ ಗಳನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು, ಈ ಪೈಕಿ 138 ಸ್ಯಾಂಪಲ್‌ ನಲ್ಲಿ ಡೆಲ್ಟಾ ಪ್ಲಸ್‌ ದೃಢಪಟ್ಟಿದೆ.

ಕೊರೊನಾ ಎರಡನೇ ಅಲೆ ಇನ್ನೂ ಸಂಪೂರ್ಣವಾಗಿ ಹೋಗಿಲ್ಲವಾದರೂ ಬಹಳಷ್ಟು ಮಂದಿ ತಮ್ಮ ಎಂದಿನ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ಮಾಸ್ಕ್‌ ಧರಿಸದೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಸಾರ್ವಜನಿಕ ಸ್ಥಳಗಳಲ್ಲಿ ಅಡ್ಡಾಡುತ್ತಿರುವುದು ಆತಂಕಕ್ಕೆ ಕಾರಣವಾಗುತ್ತಿದೆ.

ಕೊರೊನಾ ಮೂರನೇ ಅಲೆ ಮಕ್ಕಳಿಗೆ ಅಪಾಯಕಾರಿ ಎಂದು ತಜ್ಞರು ಎಚ್ಚರಿಸುತ್ತಿದ್ದು, ಹೀಗಾಗಿ ಚಿಕ್ಕ ಮಕ್ಕಳನ್ನು ಹೊಂದಿರುವ ಪೋಷಕರು ಕೊರೊನಾ ಲಸಿಕೆ ಪಡೆದುಕೊಳ್ಳುವುದು ಅವಶ್ಯಕವಾಗಿದೆ.

ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಹೆಚ್ಚಳ ಕಂಡು ಬರುತ್ತಿರುವ ಕಾರಣ ಕೇರಳ ಸರ್ಕಾರ ವಿಕೇಂಡ್‌ ನಲ್ಲಿ ಕಂಪ್ಲೀಟ್‌ ಲಾಕ್‌ ಡೌನ್‌ ಘೋಷಿಸಿದೆ. ಕೇರಳದಲ್ಲಿ ಶನಿವಾರ 14,087 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 109 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ.

ಒಡಿಶಾದಲ್ಲಿ ಶನಿವಾರ 2,282 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 65 ಮಂದಿ ಮೃತಪಟ್ಟಿದ್ದಾರೆ. 3,120 ಮಂದಿ ಗುಣಮುಖರಾಗಿ ಡಿಸ್ಚಾರ್ಜ್‌ ಆಗಿದ್ದು, ಒಡಿಶಾದಲ್ಲಿ ಒಟ್ಟಾರೆ 25,461 ಸಕ್ರಿಯ ಪ್ರಕರಣಗಳಿವೆ.

ಕೇರಳದಲ್ಲಿ ಮತ್ತೊಂದು ಝಿಕಾ ವೈರಸ್‌ ಪ್ರಕರಣ ದೃಢಪಟ್ಟಿದ್ದು, ಇದರಿಂದಾಗಿ ಕೇರಳದಲ್ಲಿ ಒಟ್ಟು 15 ಪ್ರಕರಣಗಳು ಪತ್ತೆಯಾದಂತಾಗಿದೆ. ಕೇರಳದಲ್ಲಿ ಝಿಕಾ ವೈರಸ್‌ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ನೆರೆ ರಾಜ್ಯ ಕರ್ನಾಟಕದಲ್ಲೂ ಆತಂಕ ಮನೆ ಮಾಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...