ಚೆನ್ನೈ: ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಕೋಚ್ ವಿರುದ್ಧ ಅನೇಕ ಕ್ರೀಡಾಪಟುಗಳು ದೂರು ಸಲ್ಲಿಸಿದ್ದಾರೆ. ಮಹಿಳಾ ಅಥ್ಲೀಟ್ ಮೇಲೆ ಕೋಚ್ ಪಿ. ನಾಗರಾಜನ್ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿ ಬಂದಿದ್ದು, ತನಿಖೆ ಆರಂಭವಾದ ನಂತರದಲ್ಲಿ ಅವರ ವಿರುದ್ಧ 7 ಕ್ಕೂ ಅಧಿಕ ಮಂದಿ ದೂರು ನೀಡಿದ್ದಾರೆ.
ಮಹಿಳಾ ಅಥ್ಲೀಟ್ ಮೇಲೆ ನಾಗರಾಜನ್ ಅನೇಕ ವರ್ಷಗಳಿಂದ ದೌರ್ಜನ್ಯ ಎಸಗಿದ ದೂರಿನ ತನಿಖೆ ನಡೆಯುತ್ತಿದೆ. ಫಿಸಿಯೋ ಥೆರಪಿಗೆ ಒಳಪಡಿಸುವ ನೆಪದಲ್ಲಿ ಅಥ್ಲೀಟ್ ಗಳನ್ನು ಲೈಂಗಿಕವಾಗಿ ಬಳಸಿಕೊಂಡಿರುವುದು ತನಿಖೆಯಲ್ಲಿ ಗೊತ್ತಾಗಿದೆ.
ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸುವುದಾಗಿ ಮತ್ತು ಕ್ರೀಡಾ ಭವಿಷ್ಯವನ್ನು ರೂಪಿಸುವುದಾಗಿ ಭರವಸೆ ನೀಡಿ ನಾಗರಾಜನ್ ಕೃತ್ಯವನ್ನು ಮುಚ್ಚಿ ಹಾಕಲು ಪ್ರಯತ್ನ ನಡೆಸಿರುವುದು ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಹೇಳಲಾಗಿದೆ.