ನವದೆಹಲಿ: ಕೋವಿಡ್ ಸೇರಿದಂತೆ ಇತರೆ ಚಿಕಿತ್ಸೆ ವೆಚ್ಚಕ್ಕೆ ಒಂದು ದಿನದೊಳಗೆ 1 ಲಕ್ಷ ರೂ. ಪಿಎಫ್ ತುರ್ತು ಮುಂಗಡ ಪಡೆದುಕೊಳ್ಳಲು ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ(EPFO) ಅವಕಾಶ ಕಲ್ಪಿಸಿದೆ.
EPFO ಉದ್ಯೋಗಿಗಳು ಕೊರೋನಾ ಸೇರಿದಂತೆ ಯಾವುದೇ ಗಂಭೀರ ಸ್ವರೂಪದ, ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ EPFO ಖಾತೆಯಿಂದ ಒಂದು ಲಕ್ಷ ರೂಪಾಯಿ ಮುಂಗಡ ಪಡೆದುಕೊಳ್ಳಬಹುದಾಗಿದೆ. ಆಸ್ಪತ್ರೆಗೆ ದಾಖಲಾದ 24 ಗಂಟೆಯೊಳಗೆ ಮುಂಗಡ ಪಡೆಯಬಹುದು. ಇದಕ್ಕಾಗಿ ಯಾವುದೇ ಅಂದಾಜು ವೆಚ್ಚದ ವಿವರಗಳನ್ನು ನೀಡಬೇಕಾಗಿಲ್ಲವೆಂದು ಹೇಳಲಾಗಿದೆ.
ತುರ್ತು ಚಿಕಿತ್ಸೆ ವೆಚ್ಚಕ್ಕೆ ಮುಂಗಡ ಪಡೆದುಕೊಳ್ಳಲು ಉದ್ಯೋಗಿ ಅಥವಾ ಅವರ ಕುಟುಂಬದ ಸದಸ್ಯರು, ಚಿಕಿತ್ಸೆ ಪಡೆಯಲು ಸರ್ಕಾರಿ, ಸಾರ್ವಜನಿಕ ವಲಯದ ಆರೋಗ್ಯ ಘಟಕಕ್ಕೆ ದಾಖಲಾಗಬೇಕು. ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರೆ, ಈ ಪ್ರಕರಣವನ್ನು ಪರಿಶೀಲಿಸಿ ಮುಂಗಡ ವಿತರಿಸಬೇಕು. ಆಸ್ಪತ್ರೆ, ಉದ್ಯೋಗಿ ಅಥವಾ ಕುಟುಂಬ ಸದಸ್ಯರ ವಿವರಗಳನ್ನು ನೀಡಬೇಕಿದೆ. ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ 45 ದಿನಗಳಲ್ಲಿ ಉದ್ಯೋಗಿ ವೈದ್ಯಕೀಯ ಚಿಕಿತ್ಸೆಯ ವಿವರ ಸಲ್ಲಿಸಬೇಕು ಎಂದು ಹೇಳಲಾಗಿದೆ.