ಕೊರೊನಾ ಕಾಲಘಟ್ಟದಲ್ಲಿ ಸುರಕ್ಷಿತ ಹೂಡಿಕೆಗಳತ್ತ ಸಾರ್ವಜನಿಕರು ಒಲವು ತೋರುತ್ತಿದ್ದಾರೆ. ಅದರಲ್ಲೂ ಚಿನ್ನದ ಮೇಲೆ ಹೂಡಿಕೆ ಮಾಡಲು ವಿಶೇಷ ಆಸಕ್ತಿ ಹೊಂದಿದ್ದಾರೆ. ಅಂತವರಿಗೆ ಅನುಕೂಲವಾಗುವ ‘ಚಿನ್ನದ ಬಾಂಡ್’ ಯೋಜನೆಯ ನಾಲ್ಕನೇ ಕಂತು ಸೋಮವಾರದಿಂದ ಆರಂಭವಾಗಲಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಪ್ರತಿ ಗ್ರಾಂ ಗೆ 4,807 ರೂಪಾಯಿಗಳನ್ನು ನಿಗದಿಪಡಿಸಿದ್ದು, ಆನ್ಲೈನ್ ಮೂಲಕ ಖರೀದಿಸುವವರಿಗೆ 50 ರೂಪಾಯಿ ವಿನಾಯಿತಿ ಸಿಗಲಿದೆ. ಹೀಗಾಗಿ ಈ ರೀತಿ ಖರೀದಿಸುವವರು ಪ್ರತಿ ಗ್ರಾಂಗೆ 4,757 ರೂಪಾಯಿ ಪಾವತಿಸಬೇಕಾಗುತ್ತದೆ. ಕನಿಷ್ಠ ಹೂಡಿಕೆ ಒಂದು ಗ್ರಾಂ ಇರಲಿದ್ದು, ವೈಯಕ್ತಿಕ ಖರೀದಿದಾರರಿಗೆ ಮತ್ತು ಹಿಂದೂ ಅವಿಭಕ್ತ ಕುಟುಂಬಕ್ಕೆ 4 ಕೆಜಿ ನಿಗದಿಪಡಿಸಲಾಗಿದೆ. ಟ್ರಸ್ಟ್ ಗಳಿಗೆ 20 ಕೆಜಿ ಗರಿಷ್ಠ ಮಿತಿ ವಿಧಿಸಲಾಗಿದೆ.
ಉದ್ಯೋಗಿಗಳಿಗೆ EPFO ಗುಡ್ ನ್ಯೂಸ್: ತುರ್ತು ಚಿಕಿತ್ಸೆಗೆ ಒಂದೇ ದಿನದಲ್ಲಿ ಒಂದು ಲಕ್ಷ ರೂ. ಅಡ್ವಾನ್ಸ್
ಸೋಮವಾರದಿಂದ ಶುಕ್ರವಾರದವರೆಗೆ ಬಾಂಡ್ ಖರೀದಿಸಲು ಅವಕಾಶ ಸಿಗಲಿದ್ದು, ಬ್ಯಾಂಕುಗಳು, ಸ್ಟಾಕ್ ಹೋಲ್ಡಿಂಗ್ ಕಾರ್ಪೋರೇಶನ್ ಅಫ್ ಇಂಡಿಯಾ, ಅಂಚೆ ಕಚೇರಿ, ಬಿಎಸ್ಇ ಮತ್ತು ಎನ್ಎಸ್ಇ ಮೂಲಕ ಚಿನ್ನದ ಬಾಂಡ್ ಖರೀದಿ ಮಾಡಬಹುದಾಗಿದೆ.