alex Certify OMG:ಇಲ್ಲಿದೆ ವಿಷಕಾರಿ ಉದ್ಯಾನವನ…! ಸಸ್ಯಗಳನ್ನು ಮುಟ್ಟಿದ್ರೆ ಪ್ರಾಣಕ್ಕೆ ಕುತ್ತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

OMG:ಇಲ್ಲಿದೆ ವಿಷಕಾರಿ ಉದ್ಯಾನವನ…! ಸಸ್ಯಗಳನ್ನು ಮುಟ್ಟಿದ್ರೆ ಪ್ರಾಣಕ್ಕೆ ಕುತ್ತು

ಲಂಡನ್: ನಗರದ ಕಾಂಕ್ರೀಟ್ ಕಾಡಿನಿಂದ ಬೇಸತ್ತ ಜನರು ಉದ್ಯಾನವನದತ್ತ ಮುಖ ಮಾಡುವುದು ಸಾಮಾನ್ಯ. ತಂಪಾದ ಗಾಳಿ, ಸುತ್ತಾಡಲೂ ಹಿತ. ಆದರೆ ಇಲ್ಲೊಂದೆಡೆ ವಿಷದ ಉದ್ಯಾನವನವಿದೆ. ಇಲ್ಲಿನ ಸಸ್ಯಗಳನ್ನು ಮುಟ್ಟಿದರೆ ಅಪಾಯ ಗ್ಯಾರಂಟಿ.

ಇಂಗ್ಲೆಂಡ್ ನ ನಾರ್ತಂಬರ್ಲ್ಯಾಡ್ನಲ್ಲಿ ವಿಷದ ಉದ್ಯಾನವನವಿದೆ. ಇದನ್ನು ವಿಶ್ವದ ಮಾರಕ ಉದ್ಯಾನವನ ಎಂದು ಕರೆಯಲಾಗುತ್ತದೆ. ಇಲ್ಲಿ ಮನುಷ್ಯರನ್ನು ಕೊಲ್ಲಬಲ್ಲ ವಿಷಕಾರಿ ಸಸ್ಯಗಳಿವೆ.

ಉದ್ಯಾನವನದ ಪ್ರವೇಶ ದ್ವಾರದಲ್ಲಿ ಇಲ್ಲಿನ ಸಸ್ಯಗಳು ನಿಮ್ಮನ್ನು ಕೊಲ್ಲುತ್ತದೆ ಎಂಬ ಬರಹವಿರುವ ಬೋರ್ಡ್ ಹಾಕಲಾಗಿದೆ. ಮಾರ್ಗದರ್ಶಿ ಜೊತೆ ಇದ್ದರೆ ಇಲ್ಲಿ ಪ್ರವೇಶಿಸಬಹುದಾಗಿದೆ. ಆದರೆ ಯಾವುದೇ ಸಸ್ಯದ ವಾಸನೆ ನೋಡುವುದು, ಸ್ಪರ್ಶಿಸುವುದು ಅಥವಾ ರುಚಿನೋಡುವುದನ್ನು ಇಲ್ಲಿ ನಿಷೇಧಿಸಲಾಗಿದೆ.

ಇಬ್ಬರಿಗಿಂತ ಹೆಚ್ಚು ಮಕ್ಕಳಿದ್ದರೆ ಸಿಗಲ್ಲ ಸರಕಾರಿ ಉದ್ಯೋಗ

ಕೆಲ ಪ್ರವಾಸಿಗರು ವಿಹರಿಸುತ್ತಿರುವಾಗ ಇಲ್ಲಿನ ವಿಷ ಸಸ್ಯದ ಗಾಳಿ ಸೇವಿಸಿ ಮೂರ್ಛೆ ಹೋಗಿದ್ದಾರಂತೆ. ಇಲ್ಲಿನ ವಿಷಕಾರಿ ಸಸ್ಯಗಳಲ್ಲಿ ಒಂದಾದ ಮಾಂಕ್ ಶೂಡ್, ನೀಲಿ ಹೂವುಗಳನ್ನು ಹೊಂದಿರುತ್ತದೆ ಮತ್ತು ಮಾರಕ ಹಣ್ಣುಗಳು, ಎಲೆಗಳು ಹಾಗೂ ಕಾಂಡಗಳನ್ನು ರಚಿಸುತ್ತದೆ. ಲಾರೆಲ್ ನಂತಹ ಅನೇಕ ಸಸ್ಯಗಳು ಸೈನೈಡ್ ಉತ್ಪಾದಿಸಿದರೆ, ದೈತ್ಯ ಹಾಗ್ವೀಡ್ ನಂತಹ ಕೆಲವು ಫೋಟೋಟಾಕ್ಸಿಕ್ ಸಸ್ಯಗಳಿವೆ. ಈ ಫೋಟೋಟಾಕ್ಸಿಕ್ ಸಸ್ಯಗಳಿಂದ ಚರ್ಮ ಸುಡುತ್ತದೆ. ಏಳು ವರ್ಷದವರೆಗೆ ಚರ್ಮದಲ್ಲಿ ಗುಳ್ಳೆಗಳೇಳುವ ಸಮಸ್ಯೆ ತಂದೊಡುತ್ತೆ.

Sex Racket Busted: ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ 10 ಮಂದಿ ಅರೆಸ್ಟ್, ಅದೇ ಮನೆಯಲ್ಲಿದ್ರು ವಿದ್ಯಾರ್ಥಿಗಳು

ಇನ್ನು ಉದ್ಯಾನವನದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಸುರಕ್ಷತೆಯ ಧಿರಿಸು ತೊಡುವುದು ಕಡ್ಡಾಯವಾಗಿದೆ. ಇಲ್ಲಿನ ಮುಖ್ಯ ಸಿಬ್ಬಂದಿ ಹೇಳುವ ಪ್ರಕಾರ, ‘’ಅವುಗಳೆಲ್ಲಾ ಬಹಳ ಸಾಮಾನ್ಯವಾಗಿ ನೋಡುವಂತಹ ಸಸ್ಯಗಳಾಗಿವೆ. ಅವುಗಳಲ್ಲಿ ಬಹಳಷ್ಟು ಸಸ್ಯಗಳನ್ನು ಜನರು ತಮ್ಮ ಕೈತೋಟದಲ್ಲಿ ಬೆಳೆಸುತ್ತಾರೆ. ಆದರೆ ಅವು ಎಷ್ಟು ಹಾನಿಕಾರಕ ಎಂಬುದು ಜನರಿಗೆ ತಿಳಿದಿಲ್ಲ.

ಇಂತಹ ಸಸ್ಯಗಳನ್ನು ತಮಗೆ ಅರಿವಿಲ್ಲದಂತೆ ಜನರು ಬೆಳೆಸುವುದು ಚಿಂತೆಗೀಡು ಮಾಡಿದೆ. ಸಸ್ಯಗಳು ಮಾನವರಂತೆ ತಮ್ಮ ಮೇಲೆ ಬೀರಬಲ್ಲ ಪ್ರಬಲ ಪರಿಣಾಮವನ್ನು ಜನರು ಅರಿಯುವುದಿಲ್ಲ’’ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...