ಮೇಷ : ಬಹಳ ಸಮಯದಿಂದ ನಿಮ್ಮಲ್ಲಿ ಮೂಡಿದ್ದ ತಪ್ಪು ಗ್ರಹಿಕೆಯೊಂದು ನಿವಾರಣೆಯಾಗಲಿದೆ. ಸಾರ್ವಜನಿಕ ಜೀವನದಲ್ಲಿ ಮನ್ನಣೆ ಪಡೆಯಲಿದ್ದೀರಿ. ವ್ಯವಹಾರಗಳಲ್ಲಿ ಹೂಡಿಕೆ ಮಾಡಲು ಹೋಗಬೇಡಿ. ಹಣದ ವಿಚಾರದಲ್ಲಿ ನೀವು ಎಚ್ಚರವಾಗಿದ್ದಷ್ಟೂ ಒಳ್ಳೆಯದು.
ವೃಷಭ : ಇಂದು ನಿಮ್ಮ ಆರೋಗ್ಯದಲ್ಲಿ ಏರುಪೇರಾಗಬಹುದು. ಹೀಗಾಗಿ ಹೊರಗಡೆ ಓಡಾಟ ಬೇಡವೇ ಬೇಡ. ಸಾಂಸಾರಿಕ ಜೀವನದಲ್ಲಿ ನೆಮ್ಮದಿ ಇದೆ. ಉದ್ಯೋಗದಲ್ಲಿ ಬಡ್ತಿ ಸಿಗಲಿದೆ ಎಂಬ ಸುದ್ದಿಯೊಂದನ್ನ ಕೇಳ್ಪಡಲಿದ್ದೀರಿ. ವಿದ್ಯಾರ್ಥಿಗಳ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ.
ಮಿಥುನ : ಮನೆಯಲ್ಲಿ ಶುಭ ಕಾರ್ಯ ನಡೆಯುವ ಸೂಚನೆ ಸಿಗಲಿದೆ. ವೀಕೆಂಡ್ ಆದ್ದರಿಂದ ಕುಟುಂಬಸ್ಥರೊಂದಿಗೆ ಉತ್ತಮ ಸಮಯ ಕಳೆಯುತ್ತೀರಾ. ಮನೆಗೆ ಅನಿರೀಕ್ಷಿತ ಅತಿಥಿ ಆಗಮನದ ನಿರೀಕ್ಷೆ ಇದೆ. ಅತ್ಯಮೂಲ್ಯ ವಸ್ತುವೊಂದನ್ನ ಕಳೆದುಕೊಳ್ಳುವ ಸಾಧ್ಯತೆ ಇದೆ. ಜಾಗರೂಕರಾಗಿರಿ.
ಕಟಕ : ಹಣವನ್ನ ವ್ಯರ್ಥ ಮಾಡುವ ನಿಮ್ಮ ಗುಣವನ್ನ ಬದಲಾಯಿಸಿಕೊಳ್ಳಿ. ಸಹೋದರರಿಂದ ಉತ್ತಮ ಸಲಹೆಯನ್ನ ಸ್ವೀಕರಿಸಲಿದ್ದೀರಾ. ಗರ್ಭಿಣಿಯರು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಗಂಟಲು ಹಾಗೂ ಶೀತದ ಸಮಸ್ಯೆ ನಿಮ್ಮ ಭಾದಿಸಬಹುದು. ಒತ್ತಡಕ್ಕೆ ಸಿಕ್ಕು ಯಾರಿಗೂ ಹಣಕಾಸಿನ ನೆರವು ನೀಡುವಂತಹ ಭರವಸೆ ನೀಡಲೇಬೇಡಿ.
ಸಿಂಹ :ಕುಟುಂಬ ಸದಸ್ಯರೊಂದಿಗೆ ಉತ್ತಮ ಸಮಯವನ್ನ ಕಳೆಯುತ್ತೀರಾ. ನಿಮ್ಮ ಸಂಗಾತಿಯೊಂದಿಗಿನ ಸಂಬಂಧವು ಬಲಗೊಳ್ಳಲಿದೆ. ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಹೊಸ ಉದ್ಯಮದಲ್ಲಿ ಹೂಡಿಕೆ ಮಾಡಲಿದ್ದೀರಿ.
ಕನ್ಯಾ: ಹಗಲುಗನಸು ಕಾಣೋದನ್ನ ಬಿಟ್ಟು ವಾಸ್ತವ ಜೀವನದಲ್ಲಿ ಬದುಕೋದನ್ನ ರೂಢಿಸಿಕೊಳ್ಳಿ. ಅಪರಿಚಿತರೊಂದಿಗೆ ಅನಗತ್ಯ ಮಾತು ಬೇಡವೇ ಬೇಡ. ಸ್ವಾಸ್ಥ್ಯವನ್ನ ಹೆಚ್ಚಿಸಿಕೊಳ್ಳಲು ದೇಹದಂಡನೆ ಮಾಡಿ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಇರಲಿ.
ತುಲಾ : ವಾರ ಪೂರ್ತಿ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದ ನಿಮಗೆ ಇಂದಿನಿಂದ ಶುಭ ಯೋಗ ಕೂಡಿ ಬರಲಿದೆ. ನಿಮ್ಮ ಸ್ನೇಹಿತರಿಂದ ಆರ್ಥಿಕ ನೆರವು ಸಿಗಲಿದೆ. ಜವಳಿ ಉದ್ಯಮಿಗಳಿಗೆ ಇದು ಉತ್ತಮ ದಿನ. ವಿವಾಹಕ್ಕಾಗಿ ಹುಡುಕಾಟ ನಡೆಸುತ್ತಿರುವವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ.
ವೃಶ್ಚಿಕ : ನಿಮ್ಮ ವ್ಯಾಪಾರದ ಉದ್ಯಮವನ್ನ ಇನ್ನಷ್ಟು ವಿಸ್ತರಣೆ ಮಾಡಲಿದ್ದೀರಿ. ನಿಮ್ಮ ಪ್ರತಿಭೆಗೆ ಸೂಕ್ತ ಗೌರವ ಸಿಗಲಿದೆ. ಮನಸ್ಸಿಗೆ ಚಂಚಲವಾಗಲು ಅವಕಾಶ ನೀಡಬೇಡಿ. ಈ ದಿನವನ್ನ ನೀವು ಉತ್ತಮವಾಗಿ ಕಳೆಯುತ್ತೀರಿ. ದೇವರ ಅನುಗ್ರಹವಿದೆ.
ಧನು : ಹಿರಿಯರ ಮಾರ್ಗದರ್ಶನವನ್ನ ಸ್ವೀಕಾರ ಮಾಡಲಿದ್ದೀರಾ. ನೀರಿನಂತೆ ಹಣವನ್ನ ಪೋಲು ಮಾಡಬೇಡಿ. ಅನವಶ್ಯಕ ವ್ಯಕ್ತಿಗಳ ಜೊತೆ ಮಾತು ಬೇಡವೇ ಬೇಡ. ಕೆಲಸದಲ್ಲಿ ಪ್ರಾಮಾಣಿಕತೆ ಇರಲಿ.
ಮಕರ : ಉನ್ನತ ಶಿಕ್ಷಣ ಮಾಡಬೇಕು ಎಂಬ ನಿಮ್ಮ ಕನಸು ಈಡೇರಲಿದೆ. ಕೋಪವನ್ನ ಕಡಿಮೆ ಮಾಡಿಕೊಳ್ಳಿ. ಜೀವನ ಸಂಗಾತಿಗೆ ಉತ್ತಮ ಉಡುಗೊರೆ ನೀಡಿ. ಸಂಗಾತಿಯೊಂದಿಗೆ ಉತ್ತಮ ಸಮಯವನ್ನ ಕಳೆಯುತ್ತೀರಾ. ಮಕ್ಕಳಿಂದ ಶುಭ ಸುದ್ದಿ ಕೇಳಲಿದ್ದೀರಿ.
ಕುಂಭ : ಸಣ್ಣ ಕಾಯಿಲೆಗಳು ನಿಮ್ಮ ಚಿಂತೆಗೀಡುಮಾಡಬಹುದು. ಬಹುದಿನಗಳ ಹಿಂದಿನ ಕನಸೊಂದು ನನಸಾಗೋದ್ರಿಂದ ತುಂಬಾ ಖುಷಿಯಾಗಿ ಇರಲಿದ್ದೀರಾ. ಅವಿವಾಹಿತರಿಗೆ ಮದುವೆ ಪ್ರಸ್ತಾಪ ಬರಲಿದೆ. ನವದಂಪತಿಗೆ ಸಂತಾನ ಭಾಗ್ಯವಿದೆ.
ಮೀನ : ಲಾಭ ಪಡೆಯಬೇಕು ಅನ್ನೋದು ಕೆಟ್ಟದಲ್ಲ. ಹಾಗಂತ ಅಡ್ಡದಾರಿ ಹಿಡಿಯೋದು ಬೇಡ. ಇದರಿಂದ ನಷ್ಟ ಕೂಡ ಆಗಬಹುದು ಅನ್ನೋದು ತಲೆಯಲ್ಲಿ ಇರಲಿ. ಪೋಷಕರ ಆರೋಗ್ಯದ ಬಗ್ಗೆ ಎಚ್ಚರ ವಹಿಸಿ. ವೈದ್ಯಕೀಯ ವೃತ್ತಿಯವರಿಗೆ ಅವಕಾಶ ಇದೆ. ವಿದ್ಯಾರ್ಥಿಗಳಿಗೆ, ಕೃಷಿಕರಿಗೆ ಇದು ಸಾಮಾನ್ಯ ದಿನ