alex Certify ಶಾಂಪೂ ಹಚ್ಚೋದನ್ನ ಹೇಳಿಕೊಡಲು ಹೋಗಿ ಟ್ರೋಲ್​ ಆದ ಮಾಡೆಲ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಂಪೂ ಹಚ್ಚೋದನ್ನ ಹೇಳಿಕೊಡಲು ಹೋಗಿ ಟ್ರೋಲ್​ ಆದ ಮಾಡೆಲ್​..!

ಕೇಶ ರಾಶಿಯ ಆರೈಕೆ ಮಾಡೋದು ಅಂದರೆ ಸುಲಭದ ಮಾತಲ್ಲ. ಸರಿಯಾದ ಶಾಂಪೂವನ್ನ ಆಯ್ಕೆ ಮಾಡಿಕೊಳ್ಳೋದೇ ದೊಡ್ಡ ಸವಾಲು. ನಮ್ಮ ಸೌಂದರ್ಯವನ್ನ ಹೆಚ್ಚಿಸುವಲ್ಲಿ ಕೇಶ ರಾಶಿಯು ಪ್ರಮುಖ ಪಾತ್ರ ವಹಿಸೋದ್ರಿಂದ ಗುಣಮಟ್ಟದ ಶಾಂಪೂ ಆಯ್ಕೆ ಮಾಡಿಕೊಳ್ಳೋದು ಕಠಿಣ ಸವಾಲೇ ಸರಿ..!

ಜನರ ಈ ಗೊಂದಲವನ್ನ ನಿವಾರಣೆ ಮಾಡಬೇಕು ಅಂತಾ ಪ್ರಸಿದ್ಧ ಮಾಡೆಲ್​ ಸಾರಾ ಬ್ರೌಲಿ ಶಾಂಪೂ ಬಳಕೆ ಮಾಡೋದು ಹೇಗೆ ಎಂದು ಹೇಳಿಕೋಡೋಕೆ ಹೋಗಿ ಟ್ರೋಲ್​ ಆಗಿದ್ದಾರೆ. ಟಿಕ್​ಟಾಕ್​ನಲ್ಲಿ ವಿಡಿಯೋ ಶೇರ್​ ಮಾಡಿರುವ ಸಾರಾ, ನಿಮಗೆ ಹೇರಳವಾದ ಕೇಶ ರಾಶಿ ಇದ್ದರೂ ಸಹ ಜಾಸ್ತಿ ಶಾಂಪೂ ಬಳಸಬಾರದು ಎಂದು ಹೇಳಿದ್ದಾರೆ.

ಅಲ್ಲದೇ ಶಾಂಪೂ ಹಚ್ಚುವ ಮುನ್ನ ಕೂದಲು ಒದ್ದೆಯಾಗಿರಬೇಕು ಎಂದು ಹೇಳಿದ್ದಾರೆ. ಸ್ವಲ್ಪ ಪ್ರಮಾಣದ ಶಾಂಪೂವನ್ನ ಕೈಗೆ ಹಾಕಿಕೊಂಡು ಅದನ್ನ ಬಳಿಕ ಅದನ್ನ ಎರಡೂ ಕೈಗಳಿಗೆ ತಾಕಿಸಿಕೊಳ್ಳಿ. ಬಳಿಕ ಇದನ್ನ ಕೂದಲಿಗೆ ಹಚ್ಚಿ ಎಂದು ಹೇಳಿದ್ದಾರೆ. ತಲೆ ಬುರುಡೆಗೆ ಶಾಂಪೂ ಸರಿಯಾಗಿ ತಾಗಿದ ಬಳಿಕ ತಲೆ ತೊಳೆದುಕೊಳ್ಳಿ ಎಂದು ಟಿಕ್​ಟಾಕ್​ ವಿಡಿಯೋದಲ್ಲಿ ಹೇಳಿದ್ದಾರೆ.

ಆದರೆ ಅನೇಕರಿಗೆ ಮಾಡೆಲ್​ ಹೇಳಿರುವ ಈ ಶಾಂಪೂ ಐಡಿಯಾ ಇಷ್ಟವಾಗಿಲ್ಲ ಅನ್ನೋದು ಕಮೆಂಟ್​ ಸೆಕ್ಷನ್​ನಲ್ಲಿ ಸ್ಪಷ್ಟವಾಗಿದೆ. ಅನೇಕರು ಈಕೆ ಶಾಂಪೂ ಬಳಕೆ ಮಾಡಿದ ಪರಿಯೇ ತಪ್ಪು ಎಂದು ವ್ಯಂಗ್ಯ ಮಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...