ತನ್ನನ್ನ ತಾನು ಮಹಾ ಜಿಪುಣಿ ಎಂದುಕೊಂಡಿರುವ ಮಹಿಳೆಯೊಬ್ಬಳು ಹಣ ಉಳಿತಾಯ ಮಾಡಲಿಕ್ಕಾಗಿ ಪತಿಗೆ ಕಡಿಮೆ ಊಟ ಹಾಕೋದರಿಂದ ಹಿಡಿದು ಮಂಜಿನ ನೀರಿನಿಂದ ಹಲ್ಲುಜ್ಜಿಕೊಳ್ಳುವಂತೆ ಮಾಡಿದ್ದಾಳೆ..!
ಸ್ವಯಂ ಘೋಷಿತ ಅಮೆರಿಕದ ಅತೀ ಜಿಪುಣ ಮಹಿಳೆ 41 ವರ್ಷದ ಬೆಕಿ ಗೈಲ್ಸ್ ಎಷ್ಟರ ಮಟ್ಟಿಗೆ ಹಣ ಉಳಿಸೋದನ್ನ ಇಷ್ಟ ಪಡುತ್ತಾರೆ ಎಂದರೆ ಅತೀ ಕಡಿಮೆ ಬೆಲೆಗೆ ಇಲ್ಲವೇ ಉಚಿತವಾಗಿ ಏನು ಬೇಕಿದ್ದರೂ ಕೊಂಡುಕೊಳ್ಳಬಲ್ಲೆ ಎಂದು ಹೇಳಿಕೊಂಡಿದ್ದಾರೆ.
ಬೆಕಿ ತಮ್ಮ ಪತಿ 41 ವರ್ಷದ ಜಯ್ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಿದ್ದಾರೆ. ಉದ್ಯಮಿಯಾಗಿದ್ದ ಬೆಕಿ ವಾರ್ಷಿಕ 30 ರಿಂದ 35 ಸಾವಿರ ಡಾಲರ್ ಹಣ ಸಂಪಾದಿಸುತ್ತಿದ್ದರು. ಆದರೆ ಮಕ್ಕಳಿಗಾಗಿ ಉದ್ಯಮವನ್ನ ಬಿಡಲು ನಿರ್ಧರಿಸಿದ ಬಳಿಕ ಬೆಕಿ ಈ ರೀತಿ ಜಿಪುಣಿಯಾಗಿದ್ದಾರೆ.
ನನಗೆ ಮೊದಲ ಮಗು ಜನಿಸಿದ ವೇಳೆ ನಾನು ಉದ್ಯಮವನ್ನ ತ್ಯಜಿಸಿ ಮನೆಯಲ್ಲೇ ಇರಲು ನಿರ್ಧರಿಸಿದೆ. ಈ ವೇಳೆ ನನ್ನ ತಲೆಯಲ್ಲಿ ಹಣವನ್ನ ಸಂಪಾದಿಸೋದು ಹಾಗೂ ಹಣವನ್ನ ಉಳಿಸೋದು ಎರಡೂ ಒಂದೇ ಎಂಬ ಭಾವನೆ ಬಂದಿತು. ಹೀಗಾಗಿ ಉದ್ಯಮದಿಂದ ಬರಬೇಕಿದ್ದ ಆದಾಯವನ್ನ ಹಣ ಉಳಿಸುವ ಮೂಲಕ ಪಡೆದುಕೊಳ್ಳಬೇಕು ಎಂದು ನಿರ್ಧರಿಸಿದೆ ಎಂದು ಬೆಕಿ ಹೇಳಿದ್ದಾರೆ.
ಬಟ್ಟೆ ಹಾಗೂ ಪಾತ್ರೆಗಳನ್ನ ವಾಷಿಂಗ್ ಮಷಿನ್ಗೆ ಹಾಕಿ ಒಂದೇ ಬಾರಿಗೆ ತೊಳೆಯುವ ಮೂಲಕ ನೀರು ಹಾಗೂ ಸೋಪಿನ ಖರ್ಚನ್ನ ಉಳಿಸುತ್ತಾರಂತೆ. (ಪಾತ್ರೆ ಜೊತೆ ಬಟ್ಟೆಯನ್ನೂ ಹಾಕೋದ್ರಿಂದ ಪಾತ್ರೆ ಒಡೆಯೋದಿಲ್ಲ ಅನ್ನೋದು ಇವರ ಲೆಕ್ಕಾಚಾರ.) ಹಳೆಯ ದಿನ ಪತ್ರಿಕೆ, ಮುರಿದ ಪೀಠೋಪಕರಣಗಳು ಹಾಗೂ ಕಸದ ಬುಟ್ಟಿ ಸೇರಬೇಕಾದ ವಸ್ತುಗಳೇ ಇವರ ಮನೆಯ ಅಲಂಕಾರಿಕ ವಸ್ತುಗಳು.
ನೀರಿಗೆ ಹಣ ಪಾವತಿ ಮಾಡಬೇಕು ಎಂಬ ಕಾರಣಕ್ಕೆ ಇವರು ಮಂಜುಗಡ್ಡೆಯನ್ನೇ ಸಂಗ್ರಹಿಸಿ ಇಡುತ್ತಾರೆ. ಮಕ್ಕಳು ಹಾಗೂ ಪತಿ ಇದರಲ್ಲೇ ಹಲ್ಲುಜ್ಜಬೇಕು ಹಾಗೂ ಮುಖ ತೊಳೆದುಕೊಳ್ಳಬೇಕು. ಮನೆಯಲ್ಲಿ ನಲ್ಲಿ ಬಳಸಿದ್ರೆ ನೀರು ಹೆಚ್ಚು ಪೋಲಾಗುತ್ತೆ ಎಂಬ ಕಾರಣಕ್ಕೆ ಸಾರ್ವಜನಿಕ ನಲ್ಲಿ ಬಳಕೆ ಮಾಡುತ್ತಾರಂತೆ.
ಈಕೆಗೆ ಹಣ ಉಳಿಸುವ ಚಟ ಎಷ್ಟರ ಮಟ್ಟಿಗೆ ಇದೆ ಎಂದರೆ ಪತಿ ತನಗಿಂತ ಹೆಚ್ಚಿನ ಆಹಾರ ತಿಂದರೂ ಅದು ತಪ್ಪು ಎಂಬಂತಾಗಿದೆ. ಅಂಗಡಿಯಲ್ಲಿ ಏನಾದರೂ ಆರ್ಡರ್ ಮಾಡಿದಾಗ ಮುಕ್ಕಾಲು ಭಾಗ ಪತಿಯೇ ತಿಂದರೆ…..ಪತಿಯೇ ಮುಕ್ಕಾಲು ಭಾಗ ಹಣವನ್ನ ನೀಡಬೇಕು ಎಂಬ ರೂಲ್ಸ್ ಕೂಡ ಇದೆಯಂತೆ…! ಈ ಎಲ್ಲಾ ಹಣ ಉಳಿಸುವ ಪ್ಲಾನ್ ಮೂಲಕ ಬೆಕಿ ಉದ್ಯಮದಲ್ಲಿ ಸಂಪಾದಿಸಿದ ಹಣಕ್ಕಿಂತ ಹೆಚ್ಚಿನ ಹಣವನ್ನ ಉಳಿತಾಯದ ಮೂಲಕವೇ ಖರೀದಿ ಮಾಡಿದ್ದಾರಂತೆ.