ಶಿವಮೊಗ್ಗ: ಅನ್ ಲಾಕ್ ಆಗುತ್ತಿದ್ದಂತೆಯೇ ಕೊರೊನಾ ಸೋಂಕಿನ ಭೀತಿಯನ್ನು ಮರೆತ ಜನರು ಪ್ರವಾಸಿ ತಾಣಗಳತ್ತ ಧಾವಿಸುತ್ತಿದ್ದಾರೆ. ಅದರಲ್ಲೂ ಇಂದು ಆಷಾಢ ಅಮವಾಸ್ಯೆ ಹಿನ್ನೆಲೆಯಲ್ಲಿ ಅಮ್ಮನವರ ದೇವಸ್ಥಾನಗಳಿಗೆ ಭಕ್ತರ ದಂಡೇ ಹರಿದುಬರುತ್ತಿದೆ.
ಇಂದು ಆಷಾಢ ಶುಕ್ರವಾರ ಹಾಗೂ ಅಮವಾಸ್ಯೆ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಸಿಗಂದೂರು ದೇವಾಲಯಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ದೇವಾಲಯದಲ್ಲಿ ಜನಜಾತ್ರೆಯೇ ನೆರೆದಿದೆ. ಕೋವಿಡ್ ನಿಯಮಗಳನ್ನು ಗಾಳಿಗೆ ತೂರಲಾಗಿದ್ದು, ಮಾಸ್ಕ್, ದೈಹಿಕ ಅಂತರ ಸಂಪೂರ್ಣ ನಿರ್ಲಕ್ಷಿಸಲಾಗಿದೆ.
‘ಎಕ್ಸಾಂ ಖತಮ್ ಹೋ ಗಯೆ, ರಿಸಲ್ಟ್ ಬಾಕಿ ಹೈ’: ಅಕ್ಷಯ್ ಕುಮಾರ್ ಮೆಮೆ ವೈರಲ್
ಲಾಕ್ ಡೌನ್ ನಿಂದ ಮನೆಯಲ್ಲೇ ಬಂಧಿಯಾಗಿದ್ದ ಜನರಿಗೆ ಅನ್ ಲಾಕ್ ಆಗುತ್ತಿದ್ದಂತೆ ಸ್ವಾತಂತ್ರ್ಯ ಸಿಕ್ಕಷ್ಟು ಖುಷಿಯಾಗಿದ್ದು, ಕೊರೊನಾ ನಿಯಮಗಳನ್ನು ಉಲ್ಲಂಘಿಸಿ ಮೈಮರೆತು ಓಡಾಟ ನಡೆಸಿದ್ದಾರೆ.
ಪ್ರವಾಸಿ ತಾಣಗಳ ಭೇಟಿ, ಯಾತ್ರಾ ಸ್ಥಳಗಳಿಗೆ ಭೇಟಿ ನೀಡುವುದರಲ್ಲಿ ನಿರತರಾಗಿದ್ದಾರೆ. ಆದರೆ ದೇಶದಲ್ಲಿ ಕೋವಿಡ್ ಸಂಖ್ಯೆ ಮತ್ತೆ ಹೆಚ್ಚುತ್ತಿದ್ದು, ಮುಂಜಾಗೃತೆ ಕೈಗೊಳ್ಳದೇ ಎಚ್ಚರ ತಪ್ಪಿದರೆ ಮೂರನೇ ಅಲೆಯಲ್ಲಿ ಸಿಲುಕಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ.