ನಟ ಅಕ್ಷಯ್ ಕುಮಾರ್ ಮತ್ತು ನಟಿ ನೂಪುರ್ ಸನೋನ್ ನಟಿಸಿರುವ ‘ಫಿಲ್ಹಾಲ್ 2 ಮೊಹಬ್ಬತ್’ ಹಾಡಿನ ವಿಡಿಯೋ ಆನ್ಲೈನ್ನಲ್ಲಿ ಬಿಡುಗಡೆಯಾಗಿದೆ. ಇದರೊಟ್ಟಿಗೆ ನೆಟ್ಟಿಗರಿಂದ ಉಲ್ಲಾಸಭರಿತ ಮೆಮೆ ಕೂಡ ಸೃಷ್ಟಿಯಾಗಿ ಕುತೂಹಲ ಹೆಚ್ಚಿಸುತ್ತಿದೆ.
ಹಾಡು ನಿಧಾನವಾಗಿ ಹೆಚ್ಚೆಚ್ಚು ವೀಕ್ಷಣೆ ಪಡೆಯುತ್ತಿದೆ, ಅದೇ ರೀತಿ ನಿರ್ದಿಷ್ಟವಾಗಿ ಅಕ್ಷಯ್ ಕುಮಾರ್ ಅವರ ಹಾಡಿನ ಒಂದು ದೃಶ್ಯವನ್ನು ಬಳಸಿ ಆನ್ಲೈನ್ನಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅಕ್ಷಯ್ ಕುಮಾರ್ ನಗುವ, ಖುಷಿಯಲ್ಲಿರುವ, ಕಣ್ಷೀರೊರೆಸಿಕೊಳ್ಳುವ ಚಿತ್ರಗಳನ್ನೊಳಗೊಂಡ ಮೆಮ್ ಅದಾಗಿದೆ.
BIG NEWS: ಜೆಡಿಎಸ್ ನಾಯಕರಿಗೆ ದೇವೇಗೌಡರಿಂದ ಖಡಕ್ ವಾರ್ನಿಂಗ್
ತನ್ನ ಪ್ರೇಯಸಿ ಇನ್ನೊಬ್ಬರ ಜತೆ ಮದುವೆಯಾಗುವ ವೇಳೆ ಅಕ್ಷಯ್ ಕುಮಾರ್ ಕುಣಿದು ಸಂಭ್ರಮಿಸುವ, ಜತೆಗೆ ಅಳುತ್ತಾ ಕಣ್ಣೀರು ಒರೆಸಿಕೊಳ್ಳುವ ಸನ್ನಿವೇಶ ಅದಾಗಿದೆ.
“ಎಕ್ಸಾಮ್ ಖತಮ್ ಹೊಗಯೇ, ರಿಸಲ್ಟ್ ಬಾಕಿ ಹೈ” ಎಂದು ಒಂದು ಟ್ವೀಟ್ ಹೇಳಿದರೆ, “ನಾನು ಸದ್ಯ ನನ್ನ ಗೆಳೆಯರ ಮದುವೆಯಲ್ಲಿ ಖುಷಿಯಿಂದ ಪಾಲ್ಗೊಳ್ಳುತ್ತಿದ್ದು, ನಿನ್ನದು ಮದುವೆ ಯಾವಾಗ ಎಂದು?” ಎಂದು ಪ್ರಶ್ನಿಸುತ್ತಾರೆ ಎಂದು ಮತ್ತೊಬ್ಬರು ಪ್ರಶ್ನಿಸುತ್ತಾರೆ ಎಂದು ಆ ಫೋಟೋಗಳ ಜತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.