ಬೆಂಗಳೂರು: ಎಸ್ಎಸ್ಎಲ್ಸಿ ಮತ್ತು ಪ್ರಥಮ ಪಿಯುಸಿ ಅಂಕ ತಿದ್ದುಪಡಿಗೆ ಜುಲೈ 12 ರ ಗಡುವು ನೀಡಲಾಗಿದೆ. ಎಸ್ಎಟಿಎಸ್ ವೆಬ್ಸೈಟ್ನಲ್ಲಿ ವಿದ್ಯಾರ್ಥಿಗಳು ಪರಿಶೀಲನೆ ನಡೆಸಿ ತಪ್ಪಿದ್ದಲ್ಲಿ ತಿಳಿಸಬಹುದು. ಜುಲೈ 20 ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ.
ದ್ವಿತೀಯ ಪಿಯುಸಿ ಫಲಿತಾಂಶವನ್ನು ಎಸ್ಎಸ್ಎಲ್ಸಿ ಪರೀಕ್ಷೆ ಮತ್ತು ಪ್ರಥಮ ಪಿಯುಸಿ ಅಂಕಗಳ ಆಧಾರದ ಮೇಲೆ ನೀಡುವುದರಿಂದ ವಿದ್ಯಾರ್ಥಿಗಳಿಗೆ ತಮ್ಮ ಎಸ್ಎಸ್ಎಲ್ಸಿ ಮತ್ತು ಫಸ್ಟ್ ಪಿಯುಸಿ ಅಂಕಗಳನ್ನು ಆನ್ಲೈನ್ ಮೂಲಕ ನೋಡಲು ಪದವಿಪೂರ್ವ ಶಿಕ್ಷಣ ಇಲಾಖೆ ಅವಕಾಶ ಕಲ್ಪಿಸಿದೆ.
ವಿದ್ಯಾರ್ಥಿಗಳು ತಮ್ಮ ಎಸ್ಎಸ್ಎಲ್ಸಿ ಮತ್ತು ಫಸ್ಟ್ ಅಂಕಗಳು ಸರಿ ಇದೆಯೇ ಎಂಬುದನ್ನು ಪರಿಶೀಲಿಸಿ ತಿದ್ದುಪಡಿ ಇದ್ದರೆ ಇಲಾಖೆಯ ಗಮನಕ್ಕೆ ತರಲು ತಿಳಿಸಲಾಗಿದೆ.
https://sts.karnataka.gov.in/SATSPU/# ನಲ್ಲಿ ಅಂಕಗಳು ಲಭ್ಯವಿದೆ. ಎಸ್ಎಟಿಎಸ್, ಪರೀಕ್ಷಾ ನೋಂದಣಿ, ವಿದ್ಯಾರ್ಥಿ ಸಂಖ್ಯೆ ದಾಖಲಿಸಿ ಅಂಕಗಳನ್ನು ಪರಿಶೀಲಿಸಬಹುದು. ಅಂಕಗಳಲ್ಲಿ ತಪ್ಪುಗಳಿದ್ದರೆ ತಮ್ಮ ಶಾಲಾ ಕಾಲೇಜುಗಳ ಪ್ರಾಂಶುಪಾಲರು ತಿಳಿಸಿ ಸರಿಪಡಿಸಿಕೊಳ್ಳಲು ಸೂಚನೆ ನೀಡಲಾಗಿದೆ.