ನವದೆಹಲಿ: ಜೆಇಇ ಮೇನ್ಸ್ ಪರೀಕ್ಷೆ ಬಾಕಿ ಉಳಿದ ಮೂರು ಮತ್ತು ನಾಲ್ಕನೇ ಆವೃತ್ತಿಗಳ ಪರೀಕ್ಷೆಯನ್ನು ನಡೆಸಲು ದಿನಾಂಕ ನಿಗದಿ ಮಾಡಲಾಗಿದೆ.
ಜುಲೈ 20 ರಿಂದ 25 ರ ವರೆಗೆ ಮೂರನೇ ಆವೃತ್ತಿ, ಜುಲೈ 27 ರಿಂದ ಆಗಸ್ಟ್ 2 ರವರೆಗೆ 4ನೇ ಆವೃತ್ತಿ ಪರೀಕ್ಷೆ ನಡೆಯಲಿದೆ. ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಮಂಗಳವಾರ ಬಗ್ಗೆ ಮಾಹಿತಿ ನೀಡಿದ್ದಾರೆ.
ಎರಡು ಆವೃತ್ತಿಗಳ ಫಲಿತಾಂಶ ಕೊರೋನಾ ಕಾರಣದಿಂದ ಮುಂದೂಡಲಾಗಿದ್ದು, ಆಗಸ್ಟ್ ನಲ್ಲಿ ಪರೀಕ್ಷೆ ಘೋಷಿಸುವ ಸಾಧ್ಯತೆ ಇದೆ. ಕೋವಿಡ್ ಸುರಕ್ಷತಾ ನಿಯಮಗಳನ್ನು ಪಾಲಿಸುವುದರೊಂದಿಗೆ ಜೆಇಇ ಮುಖ್ಯ ಪರೀಕ್ಷೆ ಮೂರು ಮತ್ತು ನಾಲ್ಕನೇ ಆವೃತ್ತಿ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.