ಈ ವರ್ಷ ಬಹುತೇಕ ಎಲ್ಲಾ ಆಟೋ ಮೇಕರ್ ಕಂಪನಿಗಳು ದೇಶದಲ್ಲಿ ತಮ್ಮ ಉತ್ಪನ್ನಗಳ ಬೆಲೆಯನ್ನ ಏರಿಕೆ ಮಾಡಿವೆ. ಫೋಲ್ಕ್ಸ್, ಟಾಟಾ ಮೋಟರ್ಸ್ ಕೂಡ ಇದೇ ಸಾಲಿಗೆ ಸೇರಿವೆ. ಟಾಟಾ ಮೋಟರ್ಸ್ ಪ್ರಯಾಣಿಕ ವಾಹನಗಳ ಬೆಲೆಯನ್ನ ಏರಿಕೆ ಮಾಡೋದಾಗಿ ಹೇಳಿದ್ದು, ಪರಿಷ್ಕೃತ ದರವು ಯಾವಾಗಿನಿಂದ ಅಸ್ತಿತ್ವಕ್ಕೆ ಬರಲಿದೆ ಅನ್ನೋದ್ರ ಬಗ್ಗೆ ಮಾಹಿತಿಯನ್ನ ನೀಡಿಲ್ಲ. ಮಾತ್ರವಲ್ಲದೇ ದರ ಏರಿಕೆ ಎಷ್ಟು ಪ್ರಮಾಣದಲ್ಲಿ ಇರಲಿದೆ ಅನ್ನೋದ್ರ ಬಗ್ಗೆಯೂ ಗುಟ್ಟನ್ನ ಬಿಟ್ಟುಕೊಟ್ಟಿಲ್ಲ.
ಭಾರತದಲ್ಲಿ ವಾಹನ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆಯಾದ ಟಾಟಾ ಮೋಟರ್ಸ್ ಶೀಘ್ರದಲ್ಲಿಯೇ ಕಾರು ಹಾಗೂ ಎಸ್ಯುವಿಗಳ ದರದಲ್ಲಿ ಏರಿಕೆಯನ್ನ ಮಾಡಲಿದೆ.
ಕಚ್ಚಾವಸ್ತುಗಳ ಬೆಲೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡುಬರುತ್ತಿರೋದರ ಹಿನ್ನೆಲೆ ಬೆಲೆ ಏರಿಕೆಯು ಅನಿವಾರ್ಯವಾಗಿದೆ ಎಂದು ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಈ ಮೂಲಕ ಟಾಟಾ ಮೋಟರ್ಸ್ ಕಂಪನಿಯು ಈ ವರ್ಷ ಬರೋಬ್ಬರಿ ಮೂರನೇ ಬಾರಿಗೆ ಕಾರುಗಳ ದರದಲ್ಲಿ ಏರಿಕೆ ಮಾಡಿದಂತಾಗಿದೆ. ಜನವರಿ ತಿಂಗಳಲ್ಲಿ ಮೊದಲ ಬಾರಿಗೆ 26 ಸಾವಿರ ರೂಪಾಯಿ ದರ ಏರಿಕೆ ಮಾಡಿತ್ತು. ಇದಾದ ಬಳಿ ಮೇ ತಿಂಗಳಲ್ಲಿ 1.8 ಪ್ರತಿಶತ ದರ ಏರಿಕೆ ಮಾಡಿತ್ತು.