
ಕೋವಿಡ್-19 ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆ ದಿನೇ ದಿನೇ ಇಳಿಮುಖವಾಗುತ್ತಿರುವ ಹಿನ್ನೆಯಲ್ಲಿ ದೇಶಾದ್ಯಂತ ಲಾಕ್ಡೌನ್ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ.
ಇದೇ ಖುಷಿಯಲ್ಲಿ, ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಹಿಮಾಚಲ ಪ್ರದೇಶದ ಮನಾಲಿ, ಶಿಮ್ಲಾ, ಖುಫ್ರಿ ಸೇರಿದಂತೆ ಹಿಮಾಲಯದ ಗಿರಿಧಾಮಗಳತ್ತ ಪ್ರವಾಸಿಗರು ದೊಡ್ಡ ಸಂಖ್ಯೆಯಲ್ಲಿ ದೌಡಾಯಿಸುತ್ತಿದ್ದಾರೆ.
ಮುಂಗಾರು ಚುರುಕು: ಭಾರಿ ಮಳೆ ಹಿನ್ನಲೆ ಕರಾವಳಿ, ಒಳನಾಡಿನ 24 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್
ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿರುವುದು ಹೊಟೇಲ್ ಮಾಲೀಕರ ಮೊಗದಲ್ಲಿ ಸಂತಸ ಅರಳಿಸಿದರೆ, ಮತ್ತೊಂದೆಡೆ, ಹೀಗೆ ದಟ್ಟವಾಗಿ ಜನಸಂದಣಿ ಸೃಷ್ಟಿಯಾಗಿ ಕೋವಿಡ್ ಸೋಂಕು ಇನ್ನಷ್ಟು ವ್ಯಾಪಕವಾಗುವ ಭೀತಿ ಪ್ರಜ್ಞಾವಂತರ ವಲಯದಲ್ಲಿ ಮೂಡಿದೆ.
ಇದೇ ವಿಚಾರವನ್ನು ಇಟ್ಟುಕೊಂಡು ರಂಗುರಂಗಿನ ಮೀಮ್ಗಳನ್ನು ಮಾಡಿ ಈ ಆತುರಗಾರ ಪ್ರವಾಸಿಗರನ್ನು ರೋಸ್ಟ್ ಮಾಡಲಾಗಿದೆ.