ನವದೆಹಲಿ: ಕೊರೋನಾ ಕಾರಣದಿಂದಾಗಿ 2020 -21 ನೇ ಸಾಲಿನ ಸಿಬಿಎಸ್ಇ 10 ಮತ್ತು 12 ನೇ ತರಗತಿ ಪರೀಕ್ಷೆಯನ್ನು ರದ್ದು ಮಾಡಲಾಗಿದೆ.
ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ 2021 -22 ನೇ ಸಾಲಿನ ಪಠ್ಯವನ್ನು ಎರಡು ಭಾಗಗಳಾಗಿ ವಿಂಗಡಿಸಲು ತೀರ್ಮಾನ ಕೈಗೊಂಡಿದೆ. ಸಿಬಿಎಸ್ಇ 10 ಮತ್ತು 12ನೇ ತರಗತಿ ಪಠ್ಯವನ್ನು ಎರಡು ಭಾಗಗಳಾಗಿ ವಿಂಗಡಿಸಲಿದ್ದು, ವಿದ್ಯಾರ್ಥಿಗಳು ಶೇಕಡ 50 ರಷ್ಟು ಪಠ್ಯವನ್ನು ಅಧ್ಯಯನ ಮಾಡಲಿದ್ದಾರೆ. ಪಠ್ಯದ ಕೊನೆಗೆ ಪರೀಕ್ಷೆ ನಡೆಸಲಾಗುವುದು.
ಎರಡನೇ ಪಠ್ಯಕ್ಕೂ ಇದೇ ಮಾದರಿ ಅನುಸರಿಸುವಂತೆ ಶಿಕ್ಷಣ ತಜ್ಞರ ಸಲಹೆ ಅನ್ವಯ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದರೊಂದಿಗೆ ಆಂತರಿಕ ಅಂಕಗಳು ಪ್ರಾಯೋಗಿಕ ಮತ್ತು ಪ್ರಾಜೆಕ್ಟ್ ಕೂಡ ಪಠ್ಯದಲ್ಲಿರಲಿದೆ. ಮುಂದಿನ ಆದೇಶದವರೆಗೂ ಆನ್ ಲೈನ್ ಮೂಲಕವೇ ತರಗತಿಗಳು ನಡೆಯುತ್ತವೆ.
2021- 22 ನೇ ಶೈಕ್ಷಣಿಕ ಸಾಲಿನಲ್ಲಿ ಸಿಬಿಎಸ್ಇ 10 ಮತ್ತು 12ನೇ ತರಗತಿಯ ಪಠ್ಯವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ ವಿದ್ಯಾರ್ಥಿಗಳು ಶೇಕಡ 50 ರಷ್ಟು ಪಠ್ಯ ಅಧ್ಯಯನ ಮಾಡಲಿದ್ದಾರೆ ಎಂದು ಹೇಳಲಾಗಿದೆ.