ಕೊರೊನಾ ವೈರಸ್ ಸೃಷ್ಟಿಸಿರುವ ಸಂಕಷ್ಟದ ಪರಿಸ್ಥಿತಿಯಲ್ಲಿ ಆರ್ಥಿಕವಾಗಿ ಹಿನ್ನಡೆ ಅನುಭವಿಸುತ್ತಿರುವವರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನ್ ಮಂತ್ರಿ ಗರೀಬ್ ಅನ್ನ ಕಲ್ಯಾಣ ಯೋಜನೆಯ 4ನೆ ಹಂತದಲ್ಲಿ 7 ರಾಜ್ಯಗಳಲ್ಲಿ ಈಗಾಗಲೇ 14,700 ಟನ್ ಆಹಾರ ಧಾನ್ಯಗಳನ್ನ ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಪ್ರಧಾನ್ ಮಂತ್ರಿ ಗರೀಬ್ ಅನ್ನ ಕಲ್ಯಾಣ ಯೋಜನೆಯ ಮೂರನೇ ಹಂತದಲ್ಲಿ 70.6 ಲಕ್ಷ ಟನ್ ಆಹಾರ ಧಾನ್ಯಗಳನ್ನ ಫಲಾನಭುವಗಳಿಗೆ ವಿತರಣೆ ಮಾಡಲಾಗಿತ್ತು.
ಪಡಿತರ ಚೀಟಿಯಡಿಯಲ್ಲಿ ಉಳಿದ ನಾಲ್ಕು ರಾಜ್ಯಗಳಾದ ಆಸ್ಸಾಂ, ಚತ್ತೀಸಗಢ, ದೆಹಲಿ ಹಾಗೂ ಪಶ್ಚಿಮ ಬಂಗಾಳಗಳಿಗೆ ಶೀಘ್ರದಲ್ಲೇ ಯೋಜನೆಯ ಲಾಭ ಸಿಗಲಿದೆ.
ಕೋವಿಡ್ನಿಂದ ಉಂಟಾದ ಆರ್ಥಿಕ ಸಂಕಷ್ಟದಿಂದ ಜನರನ್ನ ಪಾರು ಮಾಡುವ ಸಲುವಾಗಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅಡಿಯಲ್ಲಿ ದೇಶದ 80 ಕೋಟಿ ಫಲಾನುಭವಿಗಳಿಗೆ ಪರಿಹಾರ ನೀಡುವ ಸಲುವಾಗಿ ಈ ಯೋಜನೆಯನ್ನ ದೇಶದಲ್ಲಿ ಮೊದಲ ಬಾರಿಗೆ ಕಳೆದ ವರ್ಷ 8 ತಿಂಗಳ ಅವಧಿಗೆ ಜಾರಿಗೆ ತರಲಾಗಿತ್ತು.
ಈ ಯೋಜನೆಯ ಮೂರನೇ ಹಂತವನ್ನ ಈ ವರ್ಷದ ಜೂನ್ ತಿಂಗಳವರೆಗೆ ವಿಸ್ತರಿಸಲಾಗಿತ್ತು. ಇದೇ ನಾಲ್ಕನೇ ಹಂತವಾಗಿ ಯೋಜನೆಯನ್ನ ನವೆಂಬರ್ ತಿಂಗಳವರೆಗೆ ವಿಸ್ತರಿಸಲಾಗಿದೆ.