alex Certify ವೈಫಲ್ಯವನ್ನು ಮೆಟ್ಟಿ ಯಶಸ್ಸು ಸಾಧಿಸಿದ ಆ್ಯಂಡಿ ಜೆಸ್ಸಿ ಈಗ ಅಮೆಜಾನ್ ಸಿಇಓ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೈಫಲ್ಯವನ್ನು ಮೆಟ್ಟಿ ಯಶಸ್ಸು ಸಾಧಿಸಿದ ಆ್ಯಂಡಿ ಜೆಸ್ಸಿ ಈಗ ಅಮೆಜಾನ್ ಸಿಇಓ

ಅಮೆಜಾನ್​ ಸಿಇಓ ಜೆಫ್​ ಬೆಜೋಸ್​ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ. ಅಮೆಜಾನ್​​​ ಕಂಪನಿಯನ್ನ ಉತ್ತುಂಗಕ್ಕೆ ಏರಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಬೆಜೋಸ್​​ ತಮ್ಮ ಅಧಿಕಾರವನ್ನ ಆಂಡಿ ಜ್ಯಾಸಿ ಅವರಿಗೆ ಹಸ್ತಾಂತರಿಸಿದ್ದಾರೆ.

ಈ ವಿಚಾರದ ಬಂದ ಬಳಿಕ ಜನರು ಆಂಡಿ ಜ್ಯಾಸಿ ಹಿನ್ನೆಲೆಯನ್ನ ಕೆದಕೋಕೆ ಶುರು ಮಾಡಿದ್ದಾರೆ.

ಬೆಜೋಸ್​ ತಮ್ಮ ಹುದ್ದೆಯಿಂದ ಕೆಳಗಿಳಿಯುವ ವೇಳೆ ದೈತ್ಯ ಕಂಪನಿಯ ಜವಾಬ್ದಾರಿಯನ್ನ ಹೊರಲು ಆಂಡಿ ಜ್ಯಾಸಿಯನ್ನ ಆಯ್ಕೆ ಮಾಡಿದ್ದಾರೆ. ಅಮೆಜಾನ್​ ನೂತನ ಸಿಇಓ ಆಂಡಿ ಜ್ಯಾಸಿ ಕತೆ ಕುತೂಹಲಕಾರಿಯಾಗಿದೆ. ಜೆಸ್ಸಿ ಕೂಡ ಆರಂಭದಲ್ಲಿ ವೈಫಲ್ಯಗಳನ್ನು ಕಂಡವರೇ. ಹಾರ್ವರ್ಡ್ ಬ್ಯುಸಿನೆಸ್​ ಶಾಲೆಯಲ್ಲಿ ಪದವಿ ಶಿಕ್ಷಣವನ್ನ ಪೂರೈಸಿದ ಬಳಿಕ ಜೆಸ್ಸಿ ಕಂಪನಿಗೆ ಸೇರ್ಪಡೆಯಾದ್ರು. ಆದರೆ ಆರಂಭದಲ್ಲೇ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದ ಜೆಸ್ಸಿಯನ್ನ ಬೆಜೋಸ್​ರೇ ಪಾರು ಮಾಡಿದ್ದರಂತೆ. ಪತ್ರಕರ್ತ ಬ್ರ್ಯಾಡ್​ ಸ್ಟೋನ್​​ ಅವರು ಬರೆದ ಅಮೆಜಾನ್​​ ಅನ್​ಬೌಂಡ್​​ ಪುಸ್ತಕದಲ್ಲಿ ಈ ಎಲ್ಲಾ ಘಟನೆಗಳನ್ನ ವಿವರಿಸಲಾಗಿದೆ.

ಐಟಿ ಕಾಯ್ದೆ ಸೆಕ್ಷನ್​ 66 ಎ ಅಡಿ ಇನ್ನೂ ಕೇಸ್​ ದಾಖಲಿಸುತ್ತಿರುವುದಕ್ಕೆ ʼಸುಪ್ರೀಂʼ ಶಾಕ್

ಜೆಸ್ಸಿಯನ್ನ ಮ್ಯಾನ್​ ಆಫ್​ ಮೆಕಾನಿಸಮ್​ ಎಂದು ಕರೆಯಲಾಗುತ್ತೆ. ಜೆಸ್ಸಿ ಎಷ್ಟು ಸುದೀರ್ಘ ಗಂಟೆಗಳ ಕಾಲ ಬೇಕಿದ್ದರೂ ಸಭೆಗಳಲ್ಲಿ ಭಾಗಿಯಾಗಬಲ್ಲರು. ಅಲ್ಲದೇ ಎಷ್ಟು ಬೇಕಿದ್ದರೂ ಕಾಗದ ಪತ್ರ ವ್ಯವಹಾರ ನಡೆಸುತ್ತಾರೆ ಹಾಗೂ ಅತ್ಯಂತ ಶಿಸ್ತಿನ ಜೀವಿ ಆಗಿದ್ದಾರೆ.

ಈ ಪದವಿಯನ್ನ ಸ್ವೀಕರಿಸುವ ಮುನ್ನ ಜೆಸ್ಸಿ ಅಮೆಜಾನ್​ ವೆಬ್​ ಸರ್ವೀಸಸ್​​ನ ಸಿಇಓ ಆಗಿ ಕಾರ್ಯನಿರ್ವಹಿಸಿದ್ದಾರೆ. ಈ ಹುದ್ದೆಯಲ್ಲಿ ಯಶಸ್ಸನ್ನ ಸಾಧಿಸಿದ ಜೆಸ್ಸಿ ಕಂಪನಿಗೆ ಸಾಕಷ್ಟು ಲಾಭವನ್ನ ತಂದು ಕೊಟ್ಟಿದ್ದಾರೆ. ಸಿಇಓ ಸ್ಥಾನಕ್ಕೆ ಏರಿರುವ ಜೆಸ್ಸಿಯು ಭಾರತದಲ್ಲಿ ಮಾಡಬೇಕಾದ ಮೊದಲ ಕಾರ್ಯವೆಂದರೆ ಕೇಂದ್ರ ಸರ್ಕಾರದ ಜೊತೆ ಸಂಬಂಧವನ್ನ ಸರಿಪಡಿಸಿಕೊಳ್ಳುವುದು. ಇದಕ್ಕಾಗಿ ಜೆಸ್ಸಿ ಯಾವ ರೀತಿಯ ತಂತ್ರ ಹೂಡುತ್ತಾರೆ ಅನ್ನೋ ಕುತೂಹಲ ಎಲ್ಲರಲ್ಲಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...