alex Certify BIG BREAKING: HDK ಬೆನ್ನಲ್ಲೇ ಸಿಎಂ BSY ಭೇಟಿಯಾದ ಸಂಸದೆ ಸುಮಲತಾ; ಕುತೂಹಲ ಮೂಡಿಸಿದ ನಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: HDK ಬೆನ್ನಲ್ಲೇ ಸಿಎಂ BSY ಭೇಟಿಯಾದ ಸಂಸದೆ ಸುಮಲತಾ; ಕುತೂಹಲ ಮೂಡಿಸಿದ ನಡೆ

ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬೆಳಿಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ, ಮೈಶುಗರ್ ಕಾರ್ಖಾನೆ ಖಾಸಗೀಕರಣ ಮಾಡದಂತೆ ಮನವಿ ಮಾಡಿದ್ದ ಬೆನ್ನಲ್ಲೇ ಇದೀಗ ಸಂಸದೆ ಸುಮಲತಾ ಸಿಎಂ ಯಡಿಯೂರಪ್ಪ ಭೇಟಿಯಾಗಿ ಚರ್ಚೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಮೈಶುಗರ್ ಕಾರ್ಖಾನೆ ಖಾಸಗಿಯವರಿಗೆ ವಹಿಸದೇ ಸರ್ಕಾರವೇ ಅದನ್ನು ಮುಂದುವರೆಸಬೇಕು ಹಾಗೂ ಮನ್ಮುಲ್ ನಲ್ಲಿನ ಅಕ್ರಮದ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸಿಎಂ ಭೇಟಿಯಾಗಿ ಕುಮಾರಸ್ವಾಮಿ ಮನವಿ ಮಾಡಿದ್ದರು. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಇದೀಗ ಸಂಸದೆ ಸುಮಲತಾ ಸಿಎಂ ಬಿ ಎಸ್ ವೈ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಸಿಎಂ ಭೇಟಿ ಬಳಿಕ ಮಾತನಾಡಿರುವ ಸುಮಲತಾ, ಮೈಶುಗರ್ ಕಾರ್ಖಾನೆ ಖಾಸಗಿಯವರಿಗೆ ವಹಿಸುವುದು ಅಥವಾ ಸರ್ಕಾರವೇ ನಡೆಸುವುದು ಇದ್ಯಾವುದೂ ಮುಖ್ಯವಲ್ಲ ರೈತರ ಹಿತರಕ್ಷಣೆ, ಜನರ ಹಿತ ಮುಖ್ಯ ಹಾಗಾಗಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಕ್ಷಣ ನಿರ್ಧಾರಗಳನ್ನು ಕೈಗೊಳ್ಳಬೇಕು. ಮೈಶುಗರ್ ವಿಚಾರದಲ್ಲಿ ರೈತರ ಸಹನೆಯಕಟ್ಟೆ ಒಡೆಯುತ್ತಿದೆ ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾಗಿ ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...