ಡಿಜಿಟಲ್ ಪೇಮೆಂಟ್ ಗೆ ಪ್ರೋತ್ಸಾಹ ಸಿಗ್ತಿದ್ದಂತೆ ಕ್ರೆಡಿಟ್ ಕಾರ್ಡ್‌ನ ಪ್ರವೃತ್ತಿ ನಿರಂತರವಾಗಿ ಹೆಚ್ಚುತ್ತಿದೆ. ಬಹುತೇಕರು ಶಾಪಿಂಗ್, ಪ್ರಯಾಣದಂತಹ ವಿಷಯಗಳಿಗೆ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುತ್ತಾರೆ. ಖಾತೆಯಲ್ಲಿ ಹಣವಿಲ್ಲದೆ ಹೋದ್ರೆ ಕ್ರೆಡಿಟ್ ಕಾರ್ಡ್‌ಗಳಲ್ಲಿ ಸಾಲ ಪಡೆಯುತ್ತಾರೆ.
ಬ್ಯಾಂಕ್ ಗಳು ಆಫರ್ ಮಾಡ್ತಿದ್ದಂತೆ ಅನೇಕರು ಕ್ರೆಡಿಟ್ ಕಾರ್ಡ್ ಪಡೆಯುತ್ತಾರೆ. ಆದ್ರೆ ಅದಕ್ಕೆ ಸಂಬಂಧಿಸಿದ ಕೆಲ ವಿಷ್ಯಗಳನ್ನು ತಿಳಿಯುವುದಿಲ್ಲ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕ್ರೆಡಿಟ್ ಕಾರ್ಡ್ ಗೆ ಸಂಬಂಧಿಸಿದಂತೆ ಕೆಲ ನಿಯಮಗಳನ್ನು ಮಾಡಿದೆ. ಕೆಲ ವಹಿವಾಟಿಗೆ ಕ್ರೆಡಿಟ್ ಕಾರ್ಡ್ ಬಳಸುವಂತಿಲ್ಲ.
ವಿದೇಶೀ ವಿನಿಮಯ ವ್ಯಾಪಾರ, ಲಾಟರಿ ಟಿಕೆಟ್‌ಗಳ ಖರೀದಿ, ಕಾಲ್ ಬ್ಯಾಕ್ ಸೇವೆಗಳು, ಬೆಟ್ಟಿಂಗ್, ಕುದುರೆ ರೇಸಿಂಗ್, ಜೂಜಾಟಕ್ಕೆ ಕ್ರೆಡಿಟ್ ಕಾರ್ಡ್ ಪಾವತಿಗಳನ್ನು ಆರ್‌ಬಿಐ ನಿಷೇಧಿಸಿದೆ. ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎಸ್‌ಬಿಐ ತನ್ನ ಗ್ರಾಹಕರಿಗೆ ಇಮೇಲ್ ಕಳುಹಿಸುವ ಮೂಲಕ ಮಾರ್ಗಸೂಚಿಗಳ ಬಗ್ಗೆ ಮಾಹಿತಿ ನೀಡಿದೆ. ಮೇಲಿನ ಉತ್ಪನ್ನಗಳು ಮತ್ತು ಸೇವೆಗಳಿಗೆ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡಲು ಸಾಧ್ಯವಿಲ್ಲವೆಂದು ಆರ್ಬಿಐ ಮಾಹಿತಿ ನೀಡಿದೆ.
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ 1999ರ ಅಡಿಯಲ್ಲಿ ಈ ಸ್ಥಳಗಳಲ್ಲಿ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ಮಾರ್ಗಸೂಚಿಯನ್ನು ಉಲ್ಲಂಘಿಸಿದಲ್ಲಿ, ಕಾರ್ಡ್‌ಹೋಲ್ಡರ್ ಹೊಣೆಗಾರನಾಗಿರುತ್ತಾನೆ. ಕ್ರೆಡಿಟ್ ಕಾರ್ಡ್ ನಿರ್ಬಂಧದ ಜೊತೆ ಶಿಕ್ಷೆ ವಿಧಿಸುವ ಅಧಿಕಾರವಿದೆ.