ತಾನು ಇನ್ಸ್ಟಾಗ್ರಾಂನಲ್ಲಿ ಬ್ಲಾಕ್ ಮಾಡಿದ್ದ ಹುಡುಗಿಯೊಬ್ಬಳು ತನ್ನ ಬಾಯ್ಫ್ರೆಂಡ್ನ ಮತ್ತೊಬ್ಬ ಗರ್ಲ್ಫ್ರೆಂಡ್ ಆಗಿದ್ದ ವಿಚಾರವನ್ನು ತಿಳಿದು ಯುವತಿಯೊಬ್ಬಳು ಶಾಕ್ ಆಗಿದ್ದಾಳೆ.
ನ್ಯೂಯಾರ್ಕ್ನ ಗ್ಯಾಬಿ ಮಾರ್ಸೆಲ್ಲಸ್ ಎಂಬ 25ರ ಯುವತಿ ಟಿಕ್ಟಾಕ್ ವಿಡಿಯೋವೊಂದರಲ್ಲಿ ಮಾತನಾಡುತ್ತಾ, “ಇನ್ಸ್ಟಾಗ್ರಾಂನಲ್ಲಿ ನನ್ನ ಬ್ಲಾಕ್ ಲಿಸ್ಟ್ ಚೆಕ್ ಮಾಡಲು ಯಾರೋ ಒಬ್ಬರು 2019ರಲ್ಲಿ ಹೇಳಿದ್ದ ದಿನವನ್ನು ನಾನು ಎಂದಿಗೂ ಮರೆಯಲಾರೆ. ನಾನು ಯಾರನ್ನು ಕಂಡೆ? ಯಾರೋ ಒಬ್ಬ ಹುಡುಗಿಯನ್ನ. ನಮ್ಮಲ್ಲಿ ಸಾಮಾನ್ಯವಾಗಿ ಏನಿತ್ತು? ನನ್ನ ಬಾಯ್ಫ್ರೆಂಡ್. ಈಗ ನಾನು ಆಕೆಯನ್ನು ಬ್ಲಾಕ್ ಮಾಡಲಿಲ್ಲ, ಹೀಗಾಗಿ ಯಾರು ಮಾಡಿದರು ಎಂದು ನೀವು ಗೆಸ್ ಮಾಡಬಹುದು” ಎಂದಿದ್ದಾರೆ.
BIG NEWS: ಬ್ಲಾಕ್ ಫಂಗಸ್ ಬಳಿಕ ದೀರ್ಘ ಕಾಲದ ಕೊರೊನಾ ರೋಗಿಗಳಲ್ಲಿ ವರದಿಯಾಯ್ತು ಮತ್ತೊಂದು ಭಯಾನಕ ಕಾಯಿಲೆ..!
ಕಳೆದ ಡಿಸೆಂಬರ್ನಲ್ಲಿ ಬ್ರಿಟನ್ನಿಂದ ಅಮೆರಿಕಕ್ಕೆ ಆಗಮಿಸಿದ್ದ ಗ್ಯಾಬ್ಬಿಯ ಬಾಯ್ಫ್ರೆಂಡ್ ಆಕೆಯೊಂದಿಗೆ ಹೊಸ ವರ್ಷದ ಸಂದರ್ಭವನ್ನು ಆಚರಿಸಿ, ರಾತ್ರಿಯೆಲ್ಲಾ ಕುಡಿಯುವಂತೆ ಮಾಡಿದ್ದಾನೆ. ಇದಾದ ಮೇಲೆ ಸಿಕ್ಕಾಪಟ್ಟೆ ಕುಡಿದ ಕಾರಣ ಗ್ಯಾಬ್ಬಿ ತನ್ನ ಫೋನ್ ಕಳೆದಿದ್ದಾಳೆ ಎಂದುಕೊಂಡು ಆಕೆಯೊಂದಿಗೆ ಜಗಳವಾಡಿದ ಆಕೆಯ ಬಾಯ್ಫ್ರೆಂಡ್, ಮನೆಗೆ ಹೋಗಲು ಕ್ಯಾಬ್ ಬುಕ್ ಮಾಬೇಕೆಂದು ಆಕೆಯ ಫೋನ್ನ ಪಾಸ್ವರ್ಡ್ ಕೇಳಿದ್ದಾನೆ.
ಟಿವಿ ಪರದೆ ಸ್ವಚ್ಛಗೊಳಿಸುವಾಗ ಪಾಲಿಸಿ ಈ ಸಲಹೆ
“ಅಂದು ರಾತ್ರಿ ನನ್ನ ಮೊಬೈಲ್ ಫೋನ್ ಅನ್ನು ನಾನು ಮಲಗಿದ್ದ ವೇಳೆ ಆತ ಚೆಕ್ ಮಾಡಿದ್ದಾನೆ ಅನಿಸುತ್ತದೆ. ಮತ್ತು ಆತ ನನ್ನ ಇನ್ಸ್ಟಾಗ್ರಾಂ ಪ್ರೊಫೈಲ್ಗೆ ಭೇಟಿ ಕೊಟ್ಟು ನನ್ನ ಇನ್ಸ್ಟಾಗ್ರಾಂ ಖಾತೆಯನ್ನು ಖಾಸಗಿಯಾಗಿ ಇಟ್ಟು, ಈ ಹುಡುಗಿಯನ್ನು ಬ್ಲಾಕ್ ಮಾಡಿದ್ದಾನೆ. ನಾನು ಆತನನ್ನು ನನ್ನ ಚಿತ್ರಗಳಿಗೆ ಟ್ಯಾಗ್ ಮಾಡುತ್ತಿದ್ದ ಕಾರಣ ಆತ ತನ್ನ ಇನ್ಸ್ಟಾಗ್ರಾಂ ಖಾತೆಯನ್ನು ಪ್ರೈವೇಟ್ ಆಗಿ ಇಟ್ಟಿದ್ದ” ಎಂದು ಗ್ಯಾಬ್ಬಿ ಹೇಳಿಕೊಂಡಿದ್ದಾರೆ.
ಬಳಿಕ ಲಂಡನ್ಗೆ ಭೇಟಿ ಕೊಟ್ಟ ವೇಳೆ ತನ್ನ ಬಾಯ್ಫ್ರೆಂಡ್ ಬೇರೆ ಮಹಿಳೆಯರೊಂದಿಗೆ ರಹಸ್ಯದ ಟ್ರಿಪ್ಗಳನ್ನು ಮಾಡುತ್ತಿದ್ದಾನೆ ಎಂದು ಕಂಡುಕೊಂಡಿದ್ದಾರೆ.