alex Certify BIG NEWS: ಬ್ಲಾಕ್​ ಫಂಗಸ್​ ಬಳಿಕ ದೀರ್ಘ ಕಾಲದ ಕೊರೊನಾ ರೋಗಿಗಳಲ್ಲಿ ವರದಿಯಾಯ್ತು ಮತ್ತೊಂದು ಭಯಾನಕ ಕಾಯಿಲೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬ್ಲಾಕ್​ ಫಂಗಸ್​ ಬಳಿಕ ದೀರ್ಘ ಕಾಲದ ಕೊರೊನಾ ರೋಗಿಗಳಲ್ಲಿ ವರದಿಯಾಯ್ತು ಮತ್ತೊಂದು ಭಯಾನಕ ಕಾಯಿಲೆ..!

ಕೊರೊನಾ ಸೋಂಕಿಗೆ ಒಳಗಾದವರಲ್ಲಿ ಬ್ಲಾಕ್​ ಫಂಗಸ್​, ಯೆಲ್ಲೋ ಫಂಗಸ್​​ಗಳು ಕಾಣಿಸುತ್ತಿರೋದರ ನಡುವೆಯೇ ಇದೀಗ ಮತ್ತೊಂದು ಆಘಾತಕಾರಿ ಪ್ರಕರಣಗಳು ವರದಿಯಾಗಿದೆ. ಮುಂಬೈನಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾದವರಲ್ಲಿ ವ್ಯಕ್ತಿಗಳಲ್ಲಿ ಅವಸ್ಕುಲಾರ್ ನೆಕ್ರೋಸಿಸ್​ ಅಥವಾ ಮೂಳೆ ಅಂಗಾಶಗಳು ಸಾಯುವ ವಿಚಿತ್ರ ಕಾಯಿಲೆ ವರದಿಯಾಗಿದೆ.

ಮಹೀಮ್​​ನ ಹಿಂದೂಜಾ ಆಸ್ಪತ್ರೆಯಲ್ಲಿ 40 ವರ್ಷದೊಳಗಿನ ಮೂವರು ಈ ಕಾಯಿಲೆಯಿಂದಾಗಿ ದಾಖಲಾಗಿದ್ದಾರೆ. ಈ ಮೂವರು 2 ತಿಂಗಳ ಹಿಂದೆಯಷ್ಟೇ ಕೊರೊನಾದಿಂದ ಗುಣಮುಖರಾಗಿದ್ದರು. ತೊಡೆಯ ಮೂಳೆಯಲ್ಲಿ ನೋವು ಕಂಡು ಬಂದ ಹಿನ್ನೆಲೆಯಲ್ಲಿ ತಪಾಸಣೆಗೆ ಒಳಗಪಡಿಸಿದ ವೇಳೆ ಈ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ ಎಂದು ಹಿಂದೂಜಾ ಆಸ್ಪತ್ರೆ ನಿರ್ದೇಶಕ ಡಾ. ಸಂಜಯ್​ ಅಗರ್​ವಾಲಾ ಹೇಳಿದ್ದಾರೆ.

ಈ ನಡುವೆ ಕೊಯಮತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ವಿಚಿತ್ರ ಶಿಲೀಂಧ್ರ ಕಾಯಿಲೆ ಮ್ಯೂಕಾರ್ಮೈಕೋಸಿಸ್​ನಿಂದ ಬಳಲುತ್ತಿರುವ 264 ರೋಗಿಗಳಲ್ಲಿ 30 ಮಂದಿ ತಮ್ಮ ದೃಷ್ಟಿಯನ್ನ ಕಳೆದುಕೊಂಡಿದ್ದಾರೆ ಎಂದು ಆಸ್ಪತ್ರೆ ಉನ್ನತ ಅಧಿಕಾರಿ ಮಾಹಿತಿ ನೀಡಿದ್ದಾರೆ. ಆರಂಭಿಕ ಹಂತದಲ್ಲೇ ಈ ಸಮಸ್ಯೆಗೆ ಚಿಕಿತ್ಸೆ ಪಡೆದವರು ಗುಣಮುಖರಾಗಿದ್ದಾರೆ. ಎಂದು ಸರ್ಕಾರಿ ಆಸ್ಪತ್ರೆ ಡೀನ್​ ಡಾ. ಎನ್​ ನಿರ್ಮಲಾ ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...