ರಾಮನಗರ: ಬೈಪಾಸ್ ರಸ್ತೆಯ ಕೆಳಗೆ ಅಳವಡಿಸಲಾಗಿದ್ದ ಪೈಪ್ ಲೈನ್ ನಲ್ಲಿ ಸಿಲುಕಿ ಪರದಾಡುತ್ತಿದ್ದ ರೈತನೋರ್ವನನ್ನು ಅಗ್ನಿಶಾಮಕ ಸಿಬ್ಬಂದಿಗಳು ರಕ್ಷಣೆ ಮಾಡಿರುವ ಘಟನೆ ರಾಮನಗರ ಜಿಲ್ಲೆ ಕೊಂಕಾನಿದೊಡ್ದಿ ಗ್ರಾಮದಲ್ಲಿ ನಡೆದಿದೆ.
ರಾಜಣ್ಣ ಎಂಬ ರೈತ ಜಮೀನಿಗೆ ನೀರಿನ ಪೈಪ್ ಅಳವಡಿಸಲೆಂದು ಹೋಗಿದ್ದಾಗ ಪೈಪ್ ಲೈನ್ ಒಳಭಾಗಕ್ಕೆ ಇಳಿದು ನೀರಿನ ಪೈಪ್ ಸಂಪರ್ಕ ಕಲ್ಪಿಸಲು ಹೋಗಿದ್ದಾರೆ. ಈ ವೇಳೆ ಸುಮಾರು 200 ಅಡಿ ಉದ್ದದ ಪೈಪ್ ಲೈನ್ ಮಧ್ಯ ಭಾಗದಲ್ಲಿ ರೈತ ಸಿಲುಕಿಕೊಂಡು ಜೀವನ್ಮರಣದ ನಡುವೆ ಹೋರಾಡಿದ್ದಾರೆ.
ತಾಜ್ ಮಹಲ್ ತದ್ರೂಪು ಸೃಷ್ಟಿಸಿದ ಮೈನ್ಕ್ರಾಫ್ಟ್ ಬಿಲ್ಡರ್
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಒಂದು ಗಂಟೆ ಕಾಲ ಕಾರ್ಯಾಚರಣೆ ನಡೆಸಿ ರೈತನನ್ನು ರಕ್ಷಿಸಿದ್ದಾರೆ. ಸದ್ಯ ರೈತ ಪ್ರಾಣಾಪಾಯದಿಂದ ಪಾರಾಗಿದ್ದಾರೆ.